

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಮೂರು ದಿನದ ಹಿಂದೆ ನೇಣುಬಿಗಿದುಕೊಂಡು ಮೃತಪಟ್ಟಿದ್ದ ಯುವಕನ ಅಂತ್ಯಸಂಸ್ಕಾರ ಅಂದೇ ಮುಗಿದಿದೆ. ಆತ ಸಾವಿಗೂ ಮುನ್ನ ವಿಷ ಕುಡಿಯುತ್ತ ಮಾಡಿದ್ದ ಸೆಲ್ಫಿ ವಿಡಿಯೋ ಇದೀಗ ವೈರಲ್ ಆಗಿದ್ದು, ಡೆತ್ನೋಟ್ನಲ್ಲಿ ಬಡ್ಡಿ ದಂಧೆಯ ಕರಾಳತೆಯ ಇಂಚಿಂಚೂ ವಿವರಿಸಲಾಗಿದೆ.
'ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನ್ಪೇಟೆ ನಿವಾಸಿ ಕೆ.ವಿ.ರಾಘವೇಂದ್ರ, ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದ. 'ನನ್ನ ಹೆಸರು ಕೆ.ವಿ. ರಾಘವೇಂದ್ರ. ನಾನು ನಂದಿ ಗ್ರಾಮದ ಮಾರಮ್ಮ ಮತ್ತು ಸುಲ್ತಾನ್ಪೇಟೆಯ ಸಪ್ಪಲಮ್ಮ ದೇವಸ್ಥಾನದ ಪೂಜಾರಿ. 2015-16ರಲ್ಲಿ ಅಕ್ಷತಾ ಕೋ ಆಪರೇಟಿವ್ ಲಿಮಿಟೆಡ್ ಎಂಬ ಖಾಸಗಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಸಾರ್ವಜನಿಕರಿಂದ ಫೈನಾನ್ಸ್ ಕಂಪನಿಗೆ ಹಣ ಕಟ್ಟಿಸಿದ್ದೆ, ಆದ್ರೆ ಆ ಕಂಪನಿ ಮುಚ್ಚಿದಾಗ ಹಣ ಕಟ್ಟಿದವರಿಗೆ ಹಣ ವಾಪಸ್ ಕೊಡಬೇಕಾಗಿ ಬಂತು. ಹಾಗಾಗಿ ಹಲವರ ಬಳಿ 8 ಲಕ್ಷ ರೂಪಾಯಿ ಸಾಲ ಮಾಡಿದ್ದೆ. ಸಾಲಗಾರರು ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ್ ಬಡ್ಡಿ ಲೆಕ್ಕದಲ್ಲಿ 1 ರಿಂದ 2 ಕೋಟಿ ರೂಪಾಯಿ ನೀಡಬೇಕೆಂದು ಕಿರುಕಳ ನೀಡುತ್ತಿದ್ದಾರೆ...' ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು
ಅಲ್ಲದೆ ರಾಘವೇಂದ್ರ, ತನ್ನ ತಂದೆ-ತಾಯಿ ವೆಂಕಟೇಶ್ ಮೂರ್ತಿ-ಸಾವಿತ್ರಮ್ಮ ಮತ್ತು ಬೈರನಾಯಕನಹಳ್ಳಿಯ ರೂಪ ಜಗದೀಶ್ ದಂಪತಿಯ ಕ್ಷಮೆಯನ್ನೂ ಕೋರಿದ್ದಾನೆ. ಇದಕ್ಕೂ ಮೊದಲು ವಿಷ ಸೇವಿಸಲು ಯತ್ನಿಸಿ ಸ್ವಲ್ಪ ವಿಷ ಕುಡಿದು ಬಾಯಿ ಸುಡುತ್ತದೆ ಎಂದಿದ್ದಾನೆ. ಇದೆಲ್ಲವೂ ಸೆಲ್ಫಿ ವಿಡಿಯೋದಲ್ಲಿದೆ. ಅಲ್ಲದೆ ಡೆತ್ ನೋಟ್ ಅನ್ನೂ ಬರೆದಿದ್ದಾನೆ. ಬಳಿಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೆಲ್ಲ ನಡೆದಿರುವುದು ಕಳೆದ ಮಂಗಳವಾರ(ಜ.5). ಆತನ ಶವಸಂಸ್ಕಾರ ಕಾರ್ಯವೂ ಮುಗಿದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಪೂಜಾರಿ ರಾಘವೇಂದ್ರ ಸಾವಿಗೂ ಮುನ್ನ ಮಾಡಿದ್ದ ಸೆಲ್ಫಿ ಸೂಸೈಡ್ ವಿಡಿಯೋ ಇದೀಗ ಅಂದರೆ ಗುರುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)