ಹಾಡಿದವರು ಮನುಷ್ಯರಲ್ಲ! ಎಐ ತಂತ್ರಜ್ಞಾನದಿಂದ ರೂಪುಗೊಂಡ ಹಾಡು

blank

ಬೆಂಗಳೂರು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಜಗತ್ತನ್ನೇ ವ್ಯಾಪಿಸಿಕೊಂಡು ಬೆಳೆಯುತ್ತಿದೆ. ಇತ್ತೀಚೆಗೆ ಬಂದ ಚಾಟ್ ಜಿಪಿಟಿ ಸೇರಿ ಹಲವು ತಂತ್ರಜ್ಞಾನ ಮಾನವನ ಕೆಲಸಗಳನ್ನು ಸುಲಭಗೊಳಿಸಿದೆ. ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯು ಒಂದು ಹಾಡನ್ನು ಹಾಡಿರುವುದು ವಿಶೇಷ.

blank
ಹಾಡಿದವರು ಮನುಷ್ಯರಲ್ಲ! ಎಐ ತಂತ್ರಜ್ಞಾನದಿಂದ ರೂಪುಗೊಂಡ ಹಾಡು

ಡಾ. ಮಹೇಶ್ ಭೂಪತಿ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿದ ಹಾಡು ‘ಕಾಝ್ ಐ ಲವ್ ಯು’. ಈ ಹಾಡಿನ ಕುರಿತಾಗಿ, ‘ಕಳೆದ ಆರು ತಿಂಗಳಿಂದ ಈ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿ, ಯಾವುದೇ ಗಾಯಕರಲ್ಲದೆ ಪೂರ್ತಿಯಾಗಿ ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ವೀಡಿಯೊ ಸಾಂಗ್ ಇದು. ಇದರಲ್ಲಿ ಸ್ತ್ರೀ ಮತ್ತು ಪುರುಷ ಎರಡೂ ಧ್ವನಿಗಳನ್ನು ಬಳಸಲಾಗಿದೆ. ಸುಮಾರು ನಾಲ್ಕು ಸಾಫ್ಟ್​ವೇರ್‌ಗಳ ಸಹಾಯದಿಂದ ಹಾಡನ್ನು ರೂಪಿಸಲಾಗಿದೆ. ಮೊದಲಿಗೆ ಇಂಗ್ಲಿಷ್ ಹಾಡಿನೊಂದಿಗೆ ಪ್ರಯತ್ನ ಮಾಡಿದ್ದೇವೆ. ಸದ್ಯದಲ್ಲೇ ಕನ್ನಡದಲ್ಲಿಯೂ ಒಂದು ಹಾಡನ್ನು ರಿಲೀಸ್ ಮಾಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ ಮಹೇಶ್ ಭೂಪತಿ.

ಪ್ರೇಮಕಥೆಯಿರುವ ಈ ಹಾಡಿಗೆ ರೇವಂತ್ ರಾಮಕುಮಾರ್ ನಾಯಕರಾಗಿದ್ದಾರೆ. ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಬೇಕು ಎಂಬ ಕಾರಣಕ್ಕೆ ಇರಾನ್‌ನ ರೂಪದರ್ಶಿ ಐದಾ ರೀದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ರೀತಿಯ ಪ್ರಯತ್ನ ಪ್ರಪಂಚದಲ್ಲಿ ಮೊದಲಾಗಿದ್ದು, ಇದನ್ನು ಗಿನ್ನೆಸ್ ದಾಖಲೆಗೆ ಕಳುಹಿಸುವ ಯೋಚನೆ ಮಹೇಶ್ ಅವರದು.

Share This Article
blank

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ? Pickles

Pickles: ಬಿಸಿ ಅನ್ನದ ಜೊತೆ ಸ್ವಲ್ಪ ಉಪ್ಪಿಕಾಯಿ ಇದ್ದರೆ ಸಾಕು ಆ ಊಟದ ರುಚಿಯೇ ಬೇರೆ.…

blank