ಆದಿಪುರುಷ್ ಸಿನಿಮಾ ವಿವಾದ; ಇದೇ ರೀತಿ ಖುರಾನ್ ಸಿನಿಮಾ ಮಾಡಿನೋಡಿ?: ಹೈಕೋರ್ಟ್

adipurush
adipurush collection
Published on

ನವದೆಹಲಿ: ಕಳೆದ 2 ವಾರಗಳ ಹಿಂದೆ ತೆರೆಗೆ ಅಬ್ಬರಿಸಿದ ಆದಿಪುರುಷ್​​ ಸಿನಿಮಾ ಕುರಿತಾಗಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಕಥೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ಬ್ಯಾನ್ ಮಾಡುವ ಜನರ ಅಪೇಕ್ಷೆಗೆ ಸ್ಪಷ್ಟನೆ ನೀಡುವಂತೆ ಕೋರ್ಟ್ ಸಿಬಿಎಫ್​ಸಿಗೆ ನಿರ್ದೇಶಿಸಿದೆ. ಸಿನಿಮಾದಲ್ಲಿ ರಾಮಾಯಣದ ಕಥೆ ಇಷ್ಟಬಂದಂತೆ ತೋರಿಸಿರುವ ಚಿತ್ರತಂಡ ವ್ಯಾಪಕ ಟೀಕೆ ಎದುರಿಸುತ್ತಿದೆ.

ಸೋಶಿಯಲ್​​ ಮೀಡಿಯಾದಲ್ಲಿ ಆದಿಪುರುಷ್​ ಸಿನಿಮಾ ಕುರಿತಾಗಿ ನೆಟ್ಟಿಗರು ಟ್ರೋಲ್​​ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿರುವ ಕೋರ್ಟ್​​ ಒಂದು ಮಹತ್ತರವಾದ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕವಾಗಿ ಸುದ್ದಿಯಲ್ಲಿದೆ.

ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​​​ನ ಲಕ್ನೋ ಪೀಠವು, ರಾಮಾಯಣದ ಪಾತ್ರಗಳನ್ನು ಚಿತ್ರಿಸಿರುವ ಆದಿಪುರುಷ್​​ ಚಿತ್ರದ ನಿರ್ಮಾಪಕರನ್ನು ​​ಹೈಕೋರ್ಟ್​​​ ತರಾಟೆಗೆ ತೆಗೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬುಧವಾರದಂದು ನ್ಯಾಯಾಲಯವು, ಯಾವುದೇ ಒಂದು ಧರ್ಮದ ಬಗ್ಗೆ ಹಾಗೂ ಎಲ್ಲಾ ಧರ್ಮಗಳ ಭಾವನೆಗಳಿಗೆ ಸಮಾನವಾಗಿ ಕಾಳಜಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.

Adipurush

ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ್​ ನಿರ್ಮಾಪಕರನ್ನು ಟೀಕಿಸಿದರು, “ನ್ಯಾಯಾಲಯವು ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಆದಾಗ್ಯೂ, ನೀವು ಯಾವುದೇ ಧರ್ಮವನ್ನು ಈ ರೀತಿಯಾಗಿ ಚಿತ್ರಿಸಬಾರದು. ಇದೇ ರೀತಿ ಖುರಾನ್ ಮೇಲೆ ಚಿಕ್ಕ ಡಾಕ್ಯುಮೆಂಟ್ ಮಾಡಿದರೆ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

adipurush

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರಾಮಾಯಣ, ಕುರಾನ್​​ ಅಥವಾ ಬೈಬಲ್​​ನಲ್ಲಿ ಇಂತಹ ಸಿನಿಮಾಗಳನ್ನು ಏಕೆ ನಿರ್ಮಿಸಲಾಗುತ್ತದೆ. 'ನಾವು ಇದನ್ನು (ಆದಿಪುರುಷ) ಇಂದು ನಿರ್ಲಕ್ಷಿಸಿದರೆ, ಮುಂದೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಗವಾನ್ ರಾಮನನ್ನು ತಮಾಷೆಯಾಗಿ ತೋರಿಸಿರುವ ಚಿತ್ರವನ್ನು ನೋಡಿದೆ. ಇದು ತಮಾಷೆಯೇ?' ಎಂದು ಪ್ರಶ್ನಿಸಿದೆ.

ಕುರಾನ್ ಮೇಲೆ ಇದೇ ರೀತಿ ಒಂದು ಸಣ್ಣ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ಭಾವಿಸೋಣ, ಆಗ ಯಾವ ರೀತಿಯ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ನೀವು ಯೋಚಿಸಬಹುದೇ? ಆದರೆ ಹಿಂದೂಗಳ ಸಹಿಷ್ಣುತೆಯಿಂದಾಗಿ, ಚಲನಚಿತ್ರ ನಿರ್ಮಾಪಕರ ಈ ಪ್ರಮಾದದ ಹೊರತಾಗಿಯೂ ವಿಷಯಗಳು ಹದಗೆಟ್ಟಿಲ್ಲ” ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಪ್ರಕಾಶ್ ಸಿಂಗ್ ಅವರ ರಜಾಕಾಲದ ಪೀಠ ಹೇಳಿದೆ.

ಚಿತ್ರವೊಂದರಲ್ಲಿ ಶಿವನು ತನ್ನ ತ್ರಿಶೂಲದೊಂದಿಗೆ ಓಡುತ್ತಿರುವಂತೆ ತೋರಿಸಲಾಗಿತ್ತು. ಈಗ ರಾಮಾಯಣದ ಭಗವಾನ್ ರಾಮ ಮತ್ತು ಇತರ ಪಾತ್ರಗಳನ್ನು ಬಹಳ ನಾಚಿಕೆಗೇಡಿನ ರೀತಿಯಲ್ಲಿ ತೋರಿಸಲಾಗಿದೆ. ಇದು ನಿಲ್ಲಬೇಕಲ್ಲವೇ?” ಎಂದು ಪೀಠ ಪ್ರಶ್ನಿಸಿದೆ. ರಾಮಾಯಣ ಸಿನಿಮಾ ಮಾಡಿ ರಾದ್ಧಾಂತ ಸೃಷ್ಟಿಸಿದ ಆದಿಪುರುಷ್ ತಂಡಕ್ಕೆ ಅಲಹಾಬಾದ್ ಹೈಕೋರ್ಟ್ ಚಾಟಿ ಬೀಸಿದೆ. ನೀವು ಹೀಗೆ ಖುರಾನ್ ಹಾಗೂ ಬೈಬಲ್ ಕೂಡಾ ಮುಟ್ಟಬಾರದು. ನೀವು ಯಾವುದೇ ಧಾರ್ಮಿಕ ವಿಚಾರ ಮುಟ್ಟಬೇಡಿ. ಧರ್ಮವನ್ನು ತಪ್ಪಾಗಿ ತೋರಿಸಬೇಡಿ ಎಂದು ಎಚ್ಚರಿಗೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net