

ಹುಡುಗ ಹೇಳಿದ ಪ್ರಿಯೆ
ನನ್ನ ಪ್ರೀತಿ ಅಜರಾಮರ
ಸೂರ್ಯ ಚಂದ್ರ ಇರುವ ತನಕ
ಹುಡುಗಿ ಅಂದಳು ಪ್ರಿಯಾ
ನನ್ನ ಪ್ರೀತಿ ಹಾಗಲ್ಲ
ಫೋನಲ್ಲಿ ಕರೆನ್ಸಿ ಮುಗಿವ ತನಕ!
ಪ್ರೇಮಿಗಳೇ ಇಲ್ಲದೆ
ಭಣಗುಡುತ್ತಿದೆ
ಕಬ್ಬನ್ ಪಾರ್ಕ್, ಲಾಲ್ಬಾಗು
ಹೂಬಾಣ ಬಿಡಲು
ಕಾದಿರುವ ಮಾರನೆ
ಕೆಲಸವಿಲ್ಲ ಮನೆಗೆ ಹೋಗು!
ಕರೊನಾ ಕರೊನಾ
ಎನ್ನುತ್ತ ಎಲ್ಲರೂ
ಕವಿಗಾಳದದ್ದು ಕಂಡು
ಕೊರೆತಕ್ಕೆ ಅಂಜಿ
ಓಡಲಿ ವೈರಸ್
ಕಿವಿಗಳ ಮುಚ್ಚಿಕೊಂಡು