

ಕರೊನಾದಿಂದಾಗಿ
ಇವನೀಗ ಪಾಪ
ನಿಜವಾಗಿಯೂ ತಬ್ಬಲಿ
ಗೆಳತಿಯರೆಲ್ಲ ದೂರ
ಬರೀ ನಮಸ್ಕಾರ
ಕೇಳುತ್ತಿದ್ದಾನೆ ಓ ದೇವರೆ
ಯಾರನ್ನು ತಬ್ಬಲಿ?
ಕೊನೆಗೂ ಸಿಕ್ಕ ಕುಡಿಯದ
ಪರಸ್ತ್ರೀಯರನ್ನು ನೋಡದ
ಮನೆಗೆಲಸ ಮಾಡುವ ಗಂಡ
ಎಲ್ಲ ಮಹಿಳೆಯರ ಹಳೆಯ
ಕನಸನ್ನು ನನಸು ಮಾಡಿತು
ಲಾಕ್ಡೌನ್ ಮಂತ್ರದಂಡ !
ಹಲ್ವ ಅಂದರೆ ನೋಡಿ
ನಮ್ಮೂರ ಗೋಧಿ ಹಲ್ವ
ಅಂಥ ಹಲ್ವ ಇಲ್ಲಿಲ್ಲ,
ಪಾರ್ಸೆಲ್ ತರಿಸಿ
ತಿನ್ನುವಾ ಅಂದರೆ ಅಯ್ಯೋ ಹಲ್ಲಿಲ್ಲ