ಗಂಗೊಳ್ಳಿ: ಬಾರ್ಕೂರು ಸಮೀಪದ ಯಡ್ತಾಡಿಯಲ್ಲಿ ಸಿನಿಮಾ ನಟ ದಿ.ಸುನೀಲ್ ಅವರ ಮನೆಯಲ್ಲಿ ಆ.4ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಅಧಿಕೃತ ಚಾಲನೆ ನೀಡಲಾಗುವುದು. ಕುಂದಾಪ್ರ ಕನ್ನಡ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ 4ರಂದು ಬೆಳಗ್ಗೆ 10 ಗಂಟೆಗೆ ಹೋರಿಗೆ (ಕೋಣ) ಯೆರ್ಥ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ರಾಜ್ಯೋತ್ಸವ ಕಂಬಳ ಪ್ರಶಸ್ತಿ ಪುರಸ್ಕೃತ ಬಾರ್ಕೂರು ಶಾಂತಾರಾಮ ಶೆಟ್ಟಿ ಯಜಮಾನ್ಕಿ ವಹಿಸಲಿದ್ದಾರೆ. ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ ಕಾರ್ಯಕ್ರಮದ ಆಶಯದ ಕುರಿತು ಮಾತನಾಡಲಿದ್ದಾರೆ. ಕುಂದಾಪ್ರ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಅಧ್ಯಕ್ಷ ಅರುಣ್‌ಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.