ಹಾಲಾಡಿ: ಇಲ್ಲಿನ ಹೈಕಾಡಿ ಬಳಿ ಕಾಸಾಡಿ ರಸ್ತೆ ತಿರುವಿನಲ್ಲಿ ಶುಕ್ರವಾರ ದ್ವಿಚಕ್ರ ವಾಹನ ಹಾಗೂ ಗೂಡ್ಸ್ ವ್ಯಾನ್ ಡಿಕ್ಕಿಯಾಗಿ ಸವಾರ ಬೆಳ್ವೆ ಗ್ರಾಮದ ಗುಮ್ಮೋಲ ಕೆಂಜಿಮನೆ ನಿವಾಸಿ ನಾಗರಾಜ(39) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಾಗರಾಜ ಬೆಳ್ವೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು, ಮಧ್ಯಾಹ್ನ ಕುಂದಾಪುರ ಆಸ್ಪತ್ರೆಗೆ ಹೋಗುತ್ತಿದ್ದಾಗ ಗೋಳಿಯಂಗಡಿಯಿಂದ ಹಾಲಾಡಿಗೆ ಹೋಗುತ್ತಿದ್ದ ಗೂಡ್ಸ್ ವಾಹನದ ನಡುವೆ ಕಾಸಾಡಿ ಬಳಿ ರಸ್ತೆ ತಿರುವಿನಲ್ಲಿ ಡಿಕ್ಕಿಯಾಗಿದೆ. ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಶಂಕರನಾರಾಯಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ನಾಗರಾಜ ಬೆಳ್ವೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಶೋಭಾ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸಕ್ಕೆ ಶುಕ್ರವಾರ ಬೆಳಿಗ್ಗೆ ಬರುವಾಗ ಹುಚ್ಚುನಾಯಿ ಕಡಿದಿದ್ದು, ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಾಗರಾಜ ಬೆಳ್ವೆ ಹೊಟೇಲ್‌ನಲ್ಲಿ ಮಧ್ಯಾಹ್ನದ ತನಕ ಕೆಲಸ ಮಾಡಿ ಗುಮ್ಮೋಲದ ಮನೆಗೆ ಹೋಗಿ ಕುಂದಾಪುರ ಆಸ್ಪತ್ರೆಗೆ ಹೋಗುವಾಗ ಮಧ್ಯಾಹ್ನ ಮಳೆ ಕಡಿಮೆ ಇದ್ದುದರಿಂದ ಬಸ್ಸಿನ ಬದಲಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.