ಕಾರ್ಕಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ 29ನೇ ವಾರ್ಷಿಕ ಮಹಾಸಭೆ ಮಂಗಳವಾರ ಕಾರ್ಕಳದಲ್ಲಿ ನಡೆಯಿತು. ಎಸ್‌ಕೆಪಿಎ ಕಾರ್ಕಳ ವಲಯಾಧ್ಯಕ್ಷ ಟಿ.ವಿ ಸುಶೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಮಾರಂಭ ಉದ್ಘಾಟಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ವಾರ್ಷಿಕ ವರದಿ ವಾಚಿಸಿದರು.
ಕೋಶಾಧಿಕಾರಿ ಪ್ರಕಾಶ್ ಪ್ರಭು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಈಶ್ವರ್ ಕುಂಟಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಕಾರ್ಕಳ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕೆರ್ವಾಶೆ ವಂದಿಸಿದರು. ಹರೀಶ್ ಪವಾರ್ ಕಾರ್ಯಕ್ರಮ ನಿರೂಪಿಸಿದರು.