ಮಾನವನಿಂದಲೇ ಹಾನಿ ವಿಪರ್ಯಾಸ : ಉಪನ್ಯಾಸಕಿ ಪ್ರಜ್ವಲಾ ಡಿ.ಆರ್. ಅಭಿಮತ

vani

ಬೆಳ್ತಂಗಡಿ: ಮಾನವನ ಉನ್ನತ ಜೀವನಕ್ಕೆ ಪರಿಸರ ಪೂರಕವಾಗಿರುವಂತೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಜ್ವಲಾ ಡಿ.ಆರ್.ಹೇಳಿದರು.

ವಾಣಿ ಪದವಿಪೂರ್ವ ಕಾಲೇಜಿನ ಪರಿಸರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಜಾಗತಿಕ ವಿದ್ಯಮಾನಗಳು, ಅಭಿವೃದ್ಧಿ ಪೂರಕ ಯೋಜನೆಗಳು ಪರಿಸರವನ್ನು ಕಡೆಗಣಿಸಿವೆ. ಇದು ಭವಿಷ್ಯದ ಜನಾಂಗಕ್ಕೆ ಮಾರಕವಾಗಲಿದೆ. ಜ್ಞಾನಿ ಎನಿಸಿಕೊಂಡ ಮಾನವನಿಂದಲೇ ಪರಿಸರವು ಹಾನಿಗೆ ಒಳಗಾಗುತ್ತಿರುವುದು ವಿಪರ್ಯಾಸವಾಗಿದೆ. ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಪ್ರಕೃತಿಯ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಹಸಿರು ಭವಿಷ್ಯಕ್ಕಾಗಿ ನಮ್ಮ ಪಯಣ ನಿರಂತರವಾಗಬೇಕಿದೆ ಎಂದರು.

ಪ್ರಾಂಶುಪಾಲ ಡಿ.ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ., ಪರಿಸರ ಸಂಘದ ಸಂಯೋಜಕರಾದ ದೀಕ್ಷಾ, ಸ್ವಾತಿ ಉಪಸ್ಥಿತರಿದ್ದರು.ವಿಭಾ ಸ್ವಾಗತಿಸಿದರು. ಅನ್ವಿತ್ ವಂದಿಸಿ ಸ್ಫೂರ್ತಿ ನಿರೂಪಿಸಿದರು.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…