ಕೋಲಾರ/ಟೇಕಲ್: ಸ್ಪೋಟದಿಂದ ಚದರಿದ್ದ ಕಲ್ಲುಗಳನ್ನು ಒಂದು ಕರೆಯಿಂದ ಮತ್ತೊಂದು ಕಡೆಗೆ ಸಾಗಿಸುವ ವೇಳೆ ಇಟಾಚಿ ಮುಗಿಚಿ ಬಿದ್ದು ಟ್ರಾಕ್ಟರ್ ಜಖಂಗೊಂಡಿದ್ದು, ಕಾರ್ಮಿಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಹಳೆಪಾಳ್ಯ ಗ್ರಾಮದ ಮಂಜುನಾಥ್ ಮಾಲೀಕತ್ವದ ಕಲ್ಲು ಗಣಿಯಲ್ಲಿ ಸೋಮವಾರ ರಾತ್ರಿ ಸ್ಪೋಟಕವನ್ನು ಸೀಡಿಸಲಾಗಿತ್ತು. ಇದರಿಂದ ಚದುರಿದ್ದ ಕಲ್ಲುಗಳನ್ನು ಇಟಾಚಿ ಮೂಲಕ ಸಾಗಿಸಲಾಗುತ್ತಿತ್ತು.
ಸಾಗಿಸುವ ವೇಳೆ ಇಟಾಚಿ ಮುಗಿಚಿ ಬಿದಿದ್ದೆ. ಆಗ ಸಮೀಪದಲ್ಲೆ ಇದ್ದ ಟ್ರಾಕ್ಟರ್ ಸಹ ಜಖಂಗೊಂಡಿದ್ದು, ಬಂಡೆ ನಡುವೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿರಬಹುದು ಎಂದು ಬೇರೆ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಟನೆಯಿಂದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.
ಟನೆಯಿಂದ ಸ್ಥಳದಲ್ಲಿ ಜಮಾಯಿಸಿದ್ದ ಹಳೆಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರನ್ನು ಪೊಲೀಸರು ಚದುರಿಸಿದರು. ಶವ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ಕಲ್ಲುಗಣಿ ಚಟುವಟಿಕೆಗಳು ನಡೆಯುತ್ತಿದ್ದು, ಟಿಪ್ಪರ್ಗಳ ಹಾವಳಿ ಹೆಚ್ಚಾಗಿದೆ. ಕಲ್ಲು ತುಂಬಿಸಿಕೊಂಡಿರುವ ಟಿಪ್ಪರ್ಗಳು ವೇಗ ಮಿತಿಯಿಲ್ಲದೆ ಸಂಚರಿಸುತ್ತವೆ. ಇದರಿಂದಾಗಿ ಹಲವು ಭಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿದೆ. ಆದರು ಸಹ ಹಾವಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮೀನಾವೇಷ ತೋರುತ್ತಿದ್ದಾರೆ ಎಂದು ಸ್ಥಳಿಯರು ಆಕ್ರೋಶವ್ಯಕ್ತಪಡಿಸಿದ್ದಾರೆ.
- ಎಸ್ಪಿ ಭೇಟಿ ಪರಿಶೀಲನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸ್ಥಳಕ್ಕೆ ಭೇಟಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಲು ಹೊಡೆಯಲು ಅನುಮತಿ ನೀಡಲಾಗಿದೆ, ಆದರೆ ಮಾಲೀಕ ಸಿಡಿಮುದ್ದುಗಳನ್ನು ಬಳಸಿ ಬಂಡೆಗಳನ್ನು ಒಡೆಯುತ್ತಿರುವುದರಿಂದ ಟನೆ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.