ಸೊರಬ: ವೀರಶೈವ-ಲಿಂಗಾಯತ ಒಂದೇ ಆಗಿದ್ದು, ಬೇರೆ ಬೇರೆ ಎಂದು ಭಾವಿಸದೆ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುವಂತೆ ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ.ಈರೇಶ್ ಗೌಡ ತಿಳಿಸಿದರು.
ಶನಿವಾರ ಪಟ್ಟಣದ ಮುರುಘಾ ಮಠದಲ್ಲಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಗೌಡ ಕಡಸೂರು ಅಧ್ಯಕ್ಷತೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಇತ್ತೀಚೆಗೆ ಧರ್ಮ ಒಡೆಯುವ ಕೆಲಸ ನಡೆಯುತ್ತಿದೆ. ಸಮಾಜದ ಜನ ಜಾಗೃತರಾಗಿರಬೇಕು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಮಾಜದ ಪರ ಕೆಲಸ ಮಾಡಬೇಕು. ಒಬಿಸಿ ಪಂಗಡಕ್ಕೆ ಸಿಗುವ ಸರ್ಕಾರದ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗುತ್ತಿಲ್ಲ. ಸರ್ಕಾರ ವೀರಶೈವರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ನಿಗಮದಿಂದ ಉನ್ನತ ಶಿಕ್ಷಣ, ಕೊಳವೆ ಬಾವಿ ಕೊರೆಸಲು ಮುಂತಾದ ಸಾಲ ಸೌಲಭ್ಯ ಸಿಗುತ್ತದೆ. ಪದಾಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವಂತೆ ಮಾಡಲು ಪದಾಧಿಕಾರಿಗಳು ಮುಂದಾಗಬೇಕು ಎಂದರು.
ಪದಾಧಿಕಾರಿಗಳು: ಚಂದ್ರಶೇಖರ್ ನಿಜಗುಣ (ಗೌರವಾಧ್ಯಕ್ಷ), ಪಂಚಾಕ್ಷರಪ್ಪ ಗೌಡ (ಅಧ್ಯಕ್ಷ), ಸಂತೋಷ್, ಶಿವಮೂರ್ತಿ, ಕೆ.ವಿ.ವಿಜಯ್‌ಕುಮಾರ್ (ಉಪಾಧ್ಯಕ್ಷರು), ಗುರುಗೌಡ (ಪ್ರಧಾನ ಕಾರ್ಯದರ್ಶಿ), ಅವಿನಾಶ್ (ಸಹ ಕಾರ್ಯದರ್ಶಿ), ರವಿ ಗೌಡ, ಷಣ್ಮುಖ ಗೌಡ, ಗಿರೀಶ್ (ಸಂಘಟನಾ ಕಾರ್ಯದರ್ಶಿಗಳು), ಸಿ.ಪಿ.ನಾಗರಾಜ್ ಗೌಡ, ಮಲ್ಲೇಶಪ್ಪ ಗೌಡ, ಶರತ್ (ಸಂಚಾಲಕರು), ಶಿವಯೋಗಿ, ಶಶಾಂಕ್ ವಕ್ತಾರರಾಗಿ ಆಯ್ಕೆಯಾದರು.