ಶಿಲ್ಪಾ ನಾಗ್​ ರಾಜೀನಾಮೆ ಸ್ವೀಕರಿಸೋಲ್ಲ : ಉಸ್ತುವಾರಿ ಸಚಿವ ಸೋಮಶೇಖರ್

shilpa
Published on

ಬೆಂಗಳೂರು : ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಸ್ವೀಕಾರ ಮಾಡೋಲ್ಲ. ಅವರು ಪಾಲಿಕೆಯಲ್ಲಿ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ನಾಳೆ ನಾನೇ ಮೈಸೂರಿಗೆ ತೆರಳಿ ಎಲ್ಲವನ್ನೂ ಸರಿ ಮಾಡ್ತೀನಿ ಎಂದು ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರು ನಗರಕ್ಕಾಗಿ ದುಡಿಯುವ ಆಸೆಯಿದ್ದರೂ ಉಸಿರುಕಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಆಗದೆ ರಾಜೀನಾಮೆ ಕೊಟ್ಟಿದ್ದೀನೆಂದು ಪಾಲಿಕೆ ಆಯುಕ್ತೆ ಐಎಎಸ್​ ಅಧಿಕಾರಿಯಾದ ಶಿಲ್ಪಾ ನಾಗ್ ಈಗ್ಗೆ ಸ್ವಲ್ಪ ಸಮಯದ ಮುಂಚೆ ಸುದ್ದಿಗಾರರಿಗೆ ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸೋಮಶೇಖರ್​, ಡಿಸಿ ಕಿರುಕುಳ ವಿಚಾರ ಸಿಎಂ ಗಮನಕ್ಕೂ ತರಲಾಗಿದೆ. ನಾಳೆ ನಾನು ಮೈಸೂರಿಗೆ ತೆರಳಿ ಮುಂದಿನ ಕ್ರಮ ಕೈಗೊಳ್ತೀನಿ. ಮುಖ್ಯ ಕಾರ್ಯದರ್ಶಿಗಳು ಕೂಡ ಪ್ರಕರಣದ ಬಗ್ಗೆ ಪರಿಶೀಲನೆ ಮಾಡಲು ಮೈಸೂರಿಗೆ ಹೋಗ್ತಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net