More

    ಪಟ್ನಾ ಏಮ್ಸ್​ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವಾಕ್ಸಿನ್​ ಪ್ರಯೋಗ ಶುರು

    ಪಟ್ನಾ : ಮಕ್ಕಳಿಗೆ ಕರೊನಾ ಲಸಿಕೆ ಸೂಕ್ತವೇ, ಉಪಯುಕ್ತವೇ ಎಂದು ತಿಳಿದುಕೊಳ್ಳುವ ಪ್ರಯೋಗಗಳು ವಿದ್ಯುಕ್ತವಾಗಿ ಆರಂಭವಾಗಿವೆ. ಬಿಹಾರದ ಪಟ್ನಾದಲ್ಲಿರುವ ಆಲ್​ ಇಂಡಿಯ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​(ಏಮ್ಸ್) ಆಸ್ಪತ್ರೆಯಲ್ಲಿ 2 ರಿಂದ 18 ವರ್ಷದ ವಯೋಮಾನದ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆಯ ಫೇಸ್​ 2/3 ಕ್ಲಿನಿಕಲ್ ಟ್ರಯಲ್​ಗೆ ನಿನ್ನೆ ಚಾಲನೆ ಸಿಕ್ಕಿದೆ.

    ಮೊದಲಿಗೆ 12 ರಿಂದ 18 ರ ವಯೋಮಾನದ 15 ಮಕ್ಕಳು ಪ್ರಯೋಗಕ್ಕಾಗಿ ಆಗಮಿಸಿದ್ದು, ಮೂವರಿಗೆ ಮೊದಲ ಡೋಸ್​ ಕೋವಾಕ್ಸಿನ್ ನೀಡಿ ಟ್ರಯಲ್​ಅನ್ನು ಆರಂಭಿಸಲಾಯಿತು. ಲಸಿಕೆ ನೀಡಿದ ನಂತರ ಅವರನ್ನು 2 ಗಂಟೆಗಳವರೆಗೆ ಪರಿವೀಕ್ಷಣೆಯಲ್ಲಿರಿಸಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ‘ಬರೀ ಅವರಿಗೇಕೆ, ನಮಗೂ ಕೊಡಿ’ – ಸೀರಮ್​ ಇನ್ಸ್​​ಟಿಟ್ಯೂಟ್​ಗೂ ಬೇಕಂತೆ ಕಾನೂನು ರಕ್ಷಣೆ !

    “ಹಂತಹಂತವಾಗಿ ಪ್ರಯೋಗಗಳನ್ನು ಆರಂಭಿಸುತ್ತಿದ್ದೇವೆ. ಮೊದಲು 12 ರಿಂದ 18 ವರ್ಷಗಳ ಮಕ್ಕಳ ಗುಂಪಿಗೆ ಲಸಿಕೆ ನೀಡಲಾಗುವುದು. ನಂತರ 6 ರಿಂದ 12 ವರ್ಷಗಳ ಗುಂಪಿಗೆ ನೀಡಲಾಗುವುದು. ಕೊನೆಗೆ 2 ರಿಂದ 6 ವರ್ಷದವರಿಗೆ ನೀಡಲಾಗುವುದು” ಎಂದು ಏಮ್ಸ್​ ಸೂಪರಿಂಟೆಂಡೆಂಟ್​ ಹಾಗೂ ಪ್ರಯೋಗದ ಮುಖ್ಯಸ್ಥ ಡಾ. ಸಿಎಂ.ಸಿಂಗ್ ಹೇಳಿದ್ದಾರೆ. “ಪ್ರಯೋಗಕ್ಕೆ ಒಡ್ಡುವ ಮುನ್ನ ಮಗುವಿನ ಪೂರ್ಣ ಶಾರೀರಿಕ ಪರೀಕ್ಷೆ ಮಾಡುವುದರೊಂದಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿ ಕೋವಿಡ್​ ಆ್ಯಂಟಿಬಾಡೀಸ್​ಗಾಗಿ ಪರೀಕ್ಷಿಸಲಾಗುವುದು. ಯಾವುದಾದರೂ ಅನ್ಯ ಖಾಯಿಲೆಯಿಂದ ಬಳಲುತ್ತಿದ್ಧಾರಾ ಎಂದೂ ಪರೀಕ್ಷಿಸಲಾಗುವುದು” ಎಂದಿದ್ದಾರೆ.

    ಪ್ರಯೋಗದಲ್ಲಿ ಭಾಗವಹಿಸುವವರಿಗೆ ಪ್ರತಿ ಆಸ್ಪತ್ರೆ ಭೇಟಿಗೆ 1000 ರೂ.ಗಳಂತೆ ಹಣ ಪಾವತಿ ಮಾಡಲಾಗುವುದು. ಈವರೆಗೆ 108 ಮಕ್ಕಳು ಭಾರತ್​ ಬಯೋಟೆಕ್​ ಕಂಪೆನಿಯ ಕೋವಾಕ್ಸಿನ್ ಟ್ರಯಲ್​​ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಿಗೆ ಸ್ಕ್ರೀನಿಂಗ್ ಪ್ರಕ್ರಿಯೆಯ ನಂತರ 0.5 ಮಿಲಿಲೀಟರ್​ನಷ್ಟು ಇಂಟ್ರಾಮಾಲಿಕ್ಯುಲಾರ್ ಇಂಜೆಕ್ಷನ್​ಅನ್ನು ನೀಡಲಾಗುವುದು. ಈ ಲಸಿಕೆಯ ಎರಡು ಡೋಸ್​ಗಳನ್ನು 28 ದಿನಗಳ ಅಂತರದಲ್ಲಿ ನೀಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಸೈಬರ್​ ಕಳ್ಳರ ಬ್ಯಾಂಕ್​ ಖಾತೆಗೆ ಖಾಕಿ ಲಾಕ್​! 112 ಅಥವಾ 100 ಗೆ ಕರೆ ಮಾಡಿ, ಹಣ ಉಳಿಸಿಕೊಳ್ಳಿ!

    ಕರೊನಾ ಲಸಿಕಾ ನೀತಿ, ಖರೀದಿ ಬಗ್ಗೆ ಎಲ್ಲಾ ವಿವರ ಕೊಡಿ : ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts