More

    ಉಲ್ಲಾಸದ ಕಲಿಕೆಗೆ ಬ್ಯಾಗ್ ರಹಿತ ದಿನ; ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿಕೆ

    ಹನುಮಸಾಗರ: ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯಪುಸ್ತಕ ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರ ಬ್ಯಾಗ್ ರಹಿತ ದಿನವೆಂದು ಆಚರಿಸಲಾಗುತ್ತದೆ ಎಂದು ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿದರು.

    ಸಮೀಪದ ಕುರುಬಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬ್ಯಾಗ್‌ರಹಿತ ದಿನದ ನಿಮಿತ್ತ ಸಸಿ ನೆಟ್ಟು ಮಾತನಾಡಿದರು. ಬ್ಯಾಗ್ ರಹಿತ ಶನಿವಾರದ ಉದ್ದೇಶ ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡೆಲ್‌ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಈ ಕುರಿತು ಜಿಲ್ಲಾ, ತಾಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸುವ ಮುಖ್ಯ ಶಿಕ್ಷಕರು ಶಿಕ್ಷಕರ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದರು.

    ಮುಖ್ಯ ಶಿಕ್ಷಕ ಹನಮಂತಪ್ಪ ಬೋದುರು, ಶಿಕ್ಷಕರಾದ ವಿಜಯಕುಮಾರ ಜಾಲಿಹಾಳ, ಭರಮಪ್ಪ ಕಂಡೇಕಾರ, ಚಂದಪ್ಪ ಹಕ್ಕಿ, ಮಲ್ಲಮ್ಮ ಚನ್ನಪ್ಪನವರ, ಮ್ಯಾಗ್ಡಲೀನಾ, ದೀಪಾ ಸಾಲೋಟಗಿ, ನಸೀಮಾಬೇಗಂ ದೊಡ್ಡಮನಿ, ತುಂಗಾ ಶಿರಗುಂಪಿ, ಕಾವೇರಿ ಹಡಪದ, ಲೆಂಕಪ್ಪ ವಾಲಿಕಾರ, ಸುಂದರ ಜೋಶಿ, ರಜಿಯಾಬೇಗಂ ಜಮಕಾನ ಇತರರಿದ್ದರು.

    ಮಾವಿನಇಟಗಿ: ಸಮೀಪದ ಮಾವಿನಇಟಗಿ ಗ್ರಾಮದ ಉನ್ನತೀಕರಿಸಿದ ಸಹಿಪ್ರಾ ಶಾಲೆಯಲ್ಲಿ ಶನಿವಾರ ಬ್ಯಾಗ್ ರಹಿತ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಗೆ ಸಸಿ ವಿತರಿಸಿಲಾಯಿತು. ಮುಖ್ಯಶಿಕ್ಷಕ ಖಾಜಾಹುಸೇನ್ ಒಂಟೆಳಿ, ಎಸ್ಡಿಎಂಸಿ ಅಧ್ಯಕ್ಷ ಭರಮಗೌಡ ಗೌಡರ, ಶಿಕ್ಷಕರಾದ ಸುಶಿಲೇಂದ್ರ ಕುಲಕರ್ಣಿ, ಗುರುಪಾದಪ್ಪ ಮಚಗಾರ, ನಾರಾಯಣ ಪಂಚಾಳ, ಗೌರಮ್ಮ ತಳವಾರ, ಜ್ಯೋತಿ ಪಟಗಾರ, ದುರಗೇಶ ಗೊಲ್ಲರ, ಅಡುಗೆ ಸಿಬ್ಬಂದಿ ಲಕ್ಷ್ಮವ್ವ ಮಡಿಕೇರಿ, ಹನುಮವ್ವ ಸುಂಕದ, ಶರಣಮ್ಮ ಚೌವ್ಹಾಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts