More

    ‘ಬರೀ ಅವರಿಗೇಕೆ, ನಮಗೂ ಕೊಡಿ’ – ಸೀರಮ್​ ಇನ್ಸ್​​ಟಿಟ್ಯೂಟ್​ಗೂ ಬೇಕಂತೆ ಕಾನೂನು ರಕ್ಷಣೆ !

    ನವದೆಹಲಿ : ತಮ್ಮ ಲಸಿಕೆಗಳಿಂದ ಅಡ್ಡಪರಿಣಾಮಗಳುಂಟಾದಲ್ಲಿ ಕಾನೂನು ಕ್ರಮದಿಂದ ವಿನಾಯಿತಿ ನೀಡಬೇಕೆಂದು ಭಾರತ ಸರ್ಕಾರಕ್ಕೆ ಫೈಜರ್​ ಮತ್ತು ಮಾಡರ್ನ ಲಸಿಕೆ ಕಂಪೆನಿಗಳು ಬೇಡಿಕೆ ಇಡುತ್ತಿವೆ. ಇದೀಗ ಭಾರತೀಯ ಲಸಿಕೆ ಕೋವಿಶೀಲ್ಡ್​​ನ ಉತ್ಪಾದಕ ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯ(ಎಸ್​​ಐಐ) ತನಗೂ ಈ ರೀತಿಯ ವಿನಾಯಿತಿಯನ್ನು ವಿಸ್ತರಿಸಬೇಕೆಂದು ಕೋರಿದೆ ಎನ್ನಲಾಗಿದೆ.

    ಭಾರತೀಯ ಕಂಪೆನಿಯಾಗಲಿ ಅಥವಾ ವಿದೇಶೀ ಕಂಪೆನಿಯಾಗಲಿ, ಎಲ್ಲಾ ಲಸಿಕೆ ಉತ್ಪಾದಕರಿಗೂ ಒಂದೇ ರೀತಿಯ ರಕ್ಷಣೆ ಒದಗಿಸಬೇಕು ಎಂದು ಆಡಾರ್​ ಪೂನಾವಲ್ಲಾ ನೇತೃತ್ವದ ಎಸ್​ಐಐ ಕೇಂದ್ರ ಸರ್ಕಾರಕ್ಕೆ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಒಂದು ಪಕ್ಷ ವಿದೇಶೀ ಕಂಪೆನಿಗಳಿಗೆ ಇಂಡೆಮ್ನಿಟಿ ಪ್ರೊಟೆಕ್ಷನ್ ನೀಡಿದಲ್ಲಿ ಎಸ್​ಐಐಗೆ ಮಾತ್ರವಲ್ಲ, ಎಲ್ಲ ಲಸಿಕೆ ಕಂಪೆನಿಗಳಿಗೂ ಈ ರಕ್ಷಣೆ ಸಿಗಬೇಕು; ನಿಯಮಗಳು ಎಲ್ಲರಿಗೂ ಒಂದೇ ತೆರನಾಗಿರಬೇಕು ಎಂದು ಸೀರಮ್​​ ಕಂಪೆನಿ ಆಶಿಸುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಆಯುರ್ವೇದ ಕರೊನಾ ಔಷಧಕ್ಕೆ ಮುಗಿಬಿದ್ದ ವಿದೇಶಿಗರು- ಆನಂದಯ್ಯನವರಿಗೆ ಬಿಗಿ ಭದ್ರತೆ: ಹಳ್ಳಿಯಿಂದ ಶಿಫ್ಟ್‌!

    ಆಕ್ಸ್​​ಫರ್ಡ್​ ಆಸ್ಟ್ರಾಜೆನೆಕಾದ ಕರೊನಾ ಲಸಿಕೆಗೆ ಕೋವಿಶೀಲ್ಡ್​ ಎಂಬ ಭಾರತೀಯ ಹೆಸರು ನೀಡಿ ಎಸ್​ಐಐ ಉತ್ಪಾದನೆ ಮಾಡುತ್ತಿದೆ. ಜೊತೆಗೆ ಇನ್ನೂ ಮೂರು ಹೊಸ ಆ್ಯಂಟಿ ಕೋವಿಡ್​ ಲಸಿಕೆಗಳ ಟ್ರಯಲ್​ಗಳನ್ನೂ ಕಂಪೆನಿ ನಡೆಸುತ್ತಿದೆ. ನೊವೊವಾಕ್ಸ್ ಔಷಧ ಕಂಪೆನಿಯ ಸಹಯೋಗದೊಂದಿಗೆ ‘ಕೊವೊವಾಕ್ಸ್’ ಅನ್ನು ಅಭಿವೃದ್ಧಿಪಡಿಸಲು ಅಡ್ವಾನ್ಸಡ್​ ಟ್ರಯಲ್ಸ್​ ನಡೆಯುತ್ತಿದೆ. ಸಿಂಗಲ್​-ಡೋಸ್ ನೇಸಲ್​ ವ್ಯಾಕ್ಸಿನ್​ ಆದ ‘ಕೊಡಜೆನಿಕ್ಸ್’ ಇಂಗ್ಲೆಂಡಿನಲ್ಲಿ 1/2 ಹಂತದ ಪ್ರಯೋಗಗಳಲ್ಲಿದೆ. ಮೂರನೆಯದಾಗಿ, ‘ಸ್ಪೈಬಯೋಟೆಕ್’ ಎಂಬ ಪಾರ್ಟಿಕಲ್​ ವ್ಯಾಕ್ಸಿನ್​​ ಕೂಡ ಪ್ರಯೋಗದಲ್ಲಿದೆ ಎನ್ನಲಾಗಿದೆ.

    ಲೀಗಲ್ ಇನ್​ಡೆಮ್ನಿಟಿ : ಲೀಗಲ್​ ಇನ್​ಡೆಮ್ನಿಟಿ ನೀಡಿದರೆ ಲಸಿಕೆ ತೆಗೆದುಕೊಂಡಾಗ ಯಾರಿಗಾದರೂ ಗಂಭೀರ ಅಡ್ಡಪರಿಣಾಮ ಉಂಟಾದರೆ ಉತ್ಪಾದಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ರೀತಿಯ ರಕ್ಷಣೆಯನ್ನು ಭಾರತ ಸರ್ಕಾರ ಈವರೆಗೆ ಯಾವುದೇ ಕಂಪೆನಿಗೆ ನೀಡಿಲ್ಲ. ಆದರೆ ಭಾರತಕ್ಕೆ ಲಸಿಕೆ ಪೂರೈಸಬೇಕೆಂದರೆ ಈ ರಕ್ಷಣೆ ಒದಗಿಸಲೇಬೇಕೆಂದು ಫೈಜರ್​ ಮತ್ತು ಮಾಡರ್ನ ಕಂಪೆನಿಗಳು ಪಟ್ಟು ಹಿಡಿದಿವೆ. ಅಮೆರಿಕ ಮತ್ತು ಇತರ ದೇಶಗಳಲ್ಲಿ ನೀಡಲಾಗಿರುವ ಈ ವಿನಾಯಿತಿಯನ್ನು ಭಾರತದಲ್ಲೂ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿ ನಿನ್ನೆ ಕೇಂದ್ರ ಸಚಿವಾಲಯದ ಮೂಲಗಳು ಹೇಳಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

    ಸೈಬರ್​ ಕಳ್ಳರ ಬ್ಯಾಂಕ್​ ಖಾತೆಗೆ ಖಾಕಿ ಲಾಕ್​! 112 ಅಥವಾ 100 ಗೆ ಕರೆ ಮಾಡಿ, ಹಣ ಉಳಿಸಿಕೊಳ್ಳಿ!

    ಕರೊನಾ ಲಸಿಕಾ ನೀತಿ, ಖರೀದಿ ಬಗ್ಗೆ ಎಲ್ಲಾ ವಿವರ ಕೊಡಿ : ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts