More

    ಭಾರತೀಯ ಪತಿಗೆ ವಿಚ್ಛೇದನ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳೆ ಅಂಜು

    ನವದೆಹಲಿ: ಭಾರತೀಯ ಮಹಿಳೆ ಅಂಜು, ಈಗ ಫಾತಿಮ , ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ ಅಂಜು ವಾಘಾ ಬಾರ್ಡರ್ ಮೂಲಕ ದೇಶಕ್ಕೆ ಮರಳಿದ್ದಾರೆ. ಅಮೃತಸರದಲ್ಲಿ ಪಂಜಾಬ್ ಪೋಲೀಸ್ ಗುಪ್ತಚರ ಮತ್ತು ಐಬಿ ಅವಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ನಂತರ, ಆಕೆಯನ್ನು ಬುಧವಾರ ತಡರಾತ್ರಿ ನವದೆಹಲಿಗೆ ಬರಲು ಅನುಮತಿಸಲಾಯಿತು. ಭಾರತಕ್ಕೆ ಅಂಜು ಬರುತ್ತಿದ್ದಂತೆ ತನ್ನ ವರಸೆ ಬದಲಿಸಿದ್ದಾಳೆ.

    ತನ್ನ ವಿಚಾರಣೆಯ ಸಮಯದಲ್ಲಿ, ಅಂಜು ಭಾರತದಲ್ಲಿ ತನ್ನ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಳು ಮತ್ತು ತಾನು ಪಾಕಿಸ್ತಾನಕ್ಕೆ ಹಿಂತಿರುಗುತ್ತೇನೆ. ನನ್ನ ಭಾರತೀಯ ಪತಿ ಅರವಿಂದ್​​ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು  ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುತ್ತೇನೆ. ಪಾಕಿಸ್ತಾನಕ್ಕೆ ತೆರಳಿ ಫೇಸ್‍ಬುಕ್ ಗೆಳೆಯನ ಜತೆ ಜೀವನ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾಳೆ.

    ಅಂಜು ಅವರ ವಿಚ್ಛೇದಿತ ಪತಿಯನ್ನು ಅವರು ಪಾಕಿಸ್ತಾನದಿಂದ ಹಿಂದಿರುಗಿದ ಬಗ್ಗೆ ಕೇಳಿದಾಗ ಮತ್ತು ತನಗೆ ತಿಳಿದಿಲ್ಲ ಮತ್ತು “ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಅವರು ಆಸಕ್ತಿ ಹೊಂದಿಲ್ಲ” ಎಂದು ಹೇಳಿದ್ದಾನೆ.

    ವಿಚಾರಣೆ ವೇಳೆ ಅಂಜು ಮಾತನಾಡಿ, ತಾನು ಈ ವರ್ಷ ಜುಲೈ 27 ರಂದು ಪಾಕಿಸ್ತಾನಕ್ಕೆ ಹೋಗಿದ್ದೆ. ತಾನು ಇಸ್ಲಾಂಗೆ ಮತಾಂತರಗೊಂಡು ನುಸ್ರುಲ್ಲಾನನ್ನು ಮದುವೆಯಾಗಿದ್ದೇನೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ದಿರ್ ಜಿಲ್ಲೆಯ ಮೊಹಲ್ಲಾ ಕಲ್ಸು ಪೋಸ್ಟ್‌ನಲ್ಲಿ ವಾಸಿಸುತ್ತಿರುವ ಗುಯಿಮುಲಾ ಖಾನ್ ಅವರ ಮಗ ತನ್ನ ಗೆಳೆಯ ನಸ್ರುಲ್ಲಾ. ಅವರು ಔಷಧಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದ್ದಾಳೆ.

    ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‍ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.  ಮಹಿಳೆ ಮತಾಂತರ ಗೊಂಡು ಅಲ್ಲಿ ಮುಸ್ಲಿಂ ಯುವಕನ್ನು ಮದುವೆಯಾಗಿದ್ದಾರೆ. ಆಕೆಯ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಆಕೆಯ ಬಳಿ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    7 ಅಡಿ 9 ಇಂಚು ಉದ್ದನೆಯ ಕೂದಲಿನಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts