

Zodiac Signs : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು. ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ. ಯಾವುದೇ ಪರಿಸ್ಥಿತಿ ಬರಲಿ ತಾಳ್ಮೆಯಿಂದ ತಮ್ಮ ತಿಳುವಳಿಕೆಯ ಮೂಲಕ ಎಲ್ಲವನ್ನು ಸರಿದೂಗಿಸಿಕೊಂಡು ಹೋದರೆ ಏನೇ ಸಮಸ್ಯೆ ಬಂದರು ಪರಿಹರಿಸಬಹುದು. ಸಂಬಂಧದಲ್ಲಿ ಒಂದು ಚೂರು ಬಿರುಕು ಮೂಡಿದರು ಬದಕೇ ದುಃಖಮಯವಾಗುತ್ತದೆ. ಅದರಲ್ಲೂ ನಾನು ಮೇಲೂ ನೀನು ಕೀಳು ಎಂಬ ಭಾವನೆಯಂತು ಬರಲೇ ಬಾರದು. ಎಲ್ಲ ಕೆಲಸವನ್ನು ಸಮನಾಗಿ ಹಂಚಿಕೊಂಡು ಮಾಡಬೇಕು. ಅದನ್ನು ಬಿಟ್ಟು ಗಂಡ, ಹೆಂಡತಿಯನ್ನ ಅಥವಾ ಪತ್ನಿ, ಪತಿಯನ್ನ ಗುಲಾಮರಂತೆ ನೋಡಿಕೊಳ್ಳಬಾರದು. ಈ ರೀತಿ ಆದಾಗ ಆ ಸಂಬಂಧಕ್ಕೆ ಅರ್ಥವೇ ಇರುವುದಿಲ್ಲ.
ಅಂದಹಾಗೆ, ಕೆಲವರ ವೈವಾಹಿಕ ಜೀವನ ಊಹಿಸಿದ್ದಕ್ಕಿಂತ ವಿಭಿನ್ನವಾಗಿ ನಡೆಯುತ್ತದೆ. ಎಲ್ಲಾ ವಿವಾಹಿತ ದಂಪತಿ ಸಂತೋಷದಿಂದ ಬದುಕುವುದಿಲ್ಲ. ಮದುವೆಯ ನಂತರ ಕೆಲವು ರಾಶಿಯ ಮಹಿಳೆಯರು ತಮ್ಮ ಗಂಡಂದಿರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯ ಮಹಿಳೆಯರನ್ನೂ ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸಹ ಹೇಳಲಾಗುತ್ತದೆ.
ಈ ರಾಶಿಯ ಮಹಿಳೆಯರು ತುಂಬಾ ಆಕ್ರಮಣಕಾರಿ, ಹಠಮಾರಿ ಅಥವಾ ಭಾವನಾತ್ಮಕವಾಗಿ ತೀವ್ರ ಸ್ವಭಾವದವರು. ಈ ಗುಣವೇ ಅವರ ಕುಟುಂಬ ಜೀವನಕ್ಕೆ ಸಮಸ್ಯೆಯಾಗಬಹುದು. ಕೆಲವೊಮ್ಮೆ, ಮದುವೆಯು ವಿಚ್ಛೇದನದಲ್ಲಿಯೂ ಕೊನೆಗೊಳ್ಳಬಹುದು. ಹಾಗಾದರೆ, ಮದುವೆಯ ನಂತರ ಯಾವ ರಾಶಿಚಕ್ರ ಚಿಹ್ನೆಗಳು ತಮ್ಮ ಗಂಡಂದಿರ ಕಡೆಗೆ ಕೋಪದಿಂದ ವರ್ತಿಸುತ್ತವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮೇಷ ರಾಶಿಯಲ್ಲಿ ಜನಿಸಿದ ಜನರನ್ನು ಮಂಗಳ ಗ್ರಹ ಆಳುತ್ತದೆ. ಅವರಿಗೆ ತಮ್ಮ ಸಂಗಾತಿಯ ಮೇಲೆ ಅಚಲ ಪ್ರೀತಿ ಇರುತ್ತದೆ ಆದರೆ, ಅವರ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರೊಂದಿಗೆ ಕುಟುಂಬ ಜೀವನ ನಡೆಸುವುದು ತುಂಬಾ ಕಷ್ಟ. ಏಕೆಂದರೆ, ಅವರು ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅವರ ಮಾತುಗಳು ಯಾರನ್ನಾದರೂ ನೋಯಿಸಿದರೂ ಸಹ, ಅವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಅಭ್ಯಾಸವು ಕೆಲವೊಮ್ಮೆ ಅವರಿಗೆ ಸಮಸ್ಯೆಯಾಗಬಹುದು. ಅವರು ಹೆಚ್ಚು ಕಾಲ ದ್ವೇಷ ಸಾಧಿಸುವುದಿಲ್ಲ. ಆದರೆ, ಅವರು ಆಗಾಗ್ಗೆ ಜಗಳವಾಡುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದ ಜನರು ಯಾವುದೇ ವಿಚಾರದಲ್ಲಿ ಹೆಚ್ಚಿನ ಗಮನವನ್ನು ಹೊಂದಿರುತ್ತಾರೆ. ಯಾವುದೇ ಸಂಬಂಧದಲ್ಲಿ ನಡೆಯದ ವಿಷಯಗಳನ್ನೂ ಅವರು ಗಮನಿಸುತ್ತಾರೆ ಮತ್ತು ಜಗಳವಾಡುತ್ತಾರೆ. ಸಿಂಹ ರಾಶಿಯವರು ಸ್ವತಂತ್ರ ಸ್ವಭಾವದವರಾಗಿವುದರಿಂದ ಸಣ್ಣ ಸಣ್ಣ ವಿಚಾರಗಳಿಗೂ ಆಗಾಗ ಜಗಳವಾಡುತ್ತಾರೆ. ಊಹಿಸಲಾಗದ ಸನ್ನಿವೇಶಗಳನ್ನು ಸೃಷ್ಟಿಸುವ ಅವರ ಅಭ್ಯಾಸವು ಅವರ ಕುಟುಂಬ ಜೀವನದಲ್ಲಿ ಸಮಸ್ಯೆಯಾಗುತ್ತದೆ.
ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ತಮ್ಮ ಸಂಗಾತಿಯನ್ನು ನೋಯಿಸುವ ಗುಣ ಹೊಂದಿರುತ್ತಾರೆ. ಏಕೆಂದರೆ, ಈ ರಾಶಿಯವರು ಎಲ್ಲ ವಿಚಾರಗಳಲ್ಲೂ ತನ್ನ ಮಾತೇ ನಡೆಯಬೇಕೆಂದು ಭಾವಿಸುತ್ತಾರೆ. ಸಂಗಾತಿ ನನ್ನ ಮಾತಿಗೆ ಇಲ್ಲ ಎನ್ನಬಾರದು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ಅಲ್ಲದೆ, ಈ ರಾಶಿಯವರು ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ ತಮ್ಮದೇ ಆದ ವಾದಗಳನ್ನು ಪ್ರಾರಂಭಿಸುತ್ತಾರೆ. ಇವರು ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಬಯಸುವ ಗುಣವನ್ನು ಹೊಂದಿರುವುದಿಲ್ಲ. ಆದರೆ, ಪ್ರತಿ ಜಗಳದ ನಂತರ ತಮ್ಮ ಸಂಗಾತಿ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.