

Zodiac Signs : ಹಿಂದು ಧರ್ಮದಲ್ಲಿ ರಾಶಿಚಕ್ರಕ್ಕೆ ವಿಶೇಷ ಮಹತ್ವವಿದೆ. ಮನುಷ್ಯನ ಹುಟ್ಟಿದ ದಿನ, ಗಳಿಗೆಯನ್ನು ನೋಡಿ ಆತನ ರಾಶಿಯನ್ನು ನಿರ್ಧರಿಸಲಾಗುತ್ತದೆ. ಈ ರಾಶಿಗಳು ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯದ ಜೀವನ, ಆರ್ಥಿಕ ಸ್ಥಿತಿ, ವೈವಾಹಿಕ ಸಂಬಂಧ ಸೇರಿದಂತೆ ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಇನ್ನು ರಾಶಿಗಳಿಗೂ ಗ್ರಹಗಳಿಗೂ ಸಂಬಂಧವಿದೆ. ಏಕೆಂದರೆ, ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು ವಿಶಿಷ್ಟ ಪ್ರತಿಭೆಗಳನ್ನು ಹೊಂದಿರುತ್ತಾರೆ. ಆ ಪ್ರತಿಭೆಯನ್ನು ಗುರುತಿಸಿ ಅದಕ್ಕಾಗಿ ಶ್ರಮಿಸುವವರು ಮಾತ್ರ ಈ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಯಶಸ್ಸು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಇರಬೇಕೆಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದ್ದರಿಂದ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಏಕಕಾಲದಲ್ಲಿ ಅನೇಕ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಯಾವುದೇ ಕೆಲಸದ ಒತ್ತಡವು ಅವರ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಹೀಗಾಗಿ ಅವರಿಗೆ ಯಶಸ್ಸು ಖಂಡಿತ ದೊರಕುತ್ತದೆ.
ತಮ್ಮ ಸುತ್ತಲೂ ಎಷ್ಟೇ ಜನರಿದ್ದರೂ, ಎಲ್ಲಿಯೂ ವಿಮುಖಗೊಳ್ಳದೇ ತಮ್ಮ ಕೆಲಸವನ್ನು ಯಾರು ಅಚ್ಚುಕಟ್ಟಾಗಿ ಮಾಡುತ್ತಾರೋ ಅವರು ಯಾವುದೇ ಕೆಲಸ ಕೈಗೊಂಡರು ಸಾಧನೆ ಮಾಡೇ ಮಾಡುತ್ತಾರೆ. ಆ ರೀತಿಯಲ್ಲಿ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳಿರುವಂತೆ, ಸೃಜನಶೀಲತೆ, ಬುದ್ಧಿವಂತಿಕೆ, ನಾಯಕತ್ವ ಮತ್ತು ವಾಗ್ಮಿತೆಯಂತಹ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತ ಸಾವಿರಕ್ಕೆ ಒಬ್ಬರನ್ನು ಒಂದಿರುವಂತಹ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಿಥುನ ರಾಶಿಯಲ್ಲಿ ಜನಿಸಿದ ಜನರು ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಬುದ್ಧಿವಂತರು. ಎಲ್ಲಾ ಕ್ಷೇತ್ರಗಳಲ್ಲಿಯುವ ಅವರ ಪ್ರಯತ್ನಗಳಿರುವುದರಿಂದ ಇತರರು ಅವರನ್ನು ನೋಡಿ ಅಸೂಯೆಪಡುತ್ತಾರೆ. ಅವರು ಯಾವಾಗಲೂ ಸಂತೋಷವಾಗಿರುತ್ತಾರೆ. ಈ ರಾಶಿಯವರನ್ನು ವಿಭಿನ್ನ ಮತ್ತು ಹೊಸ ಕೆಲಸಗಳನ್ನು ಮಾಡಲು ಬಯಸುವ ಪ್ರತಿಭಾನ್ವಿತ ಜನರು ಎಂದು ನೋಡಲಾಗುತ್ತದೆ. ಅದು ಅವರಿಗೆ ಸಂತೋಷವನ್ನು ಸಹ ತರುತ್ತದೆ.
ಕನ್ಯಾ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಬುದ್ಧಿವಂತರು. ಅವರು ಯಾವಾಗಲೂ ದೂರದೃಷ್ಟಿಯನ್ನು ಹೊಂದಿರುತ್ತಾರೆ ಮತ್ತು ಭವಿಷ್ಯದ ಸಮಸ್ಯೆಗಳನ್ನು ಮುಂಚಿತವಾಗಿ ಊಹಿಸುತ್ತಾರೆ. ಅವರಿಗೆ ಅಧಿಕಾರವಿದ್ದರೆ, ಅವರು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಶಾಂತವಾಗಿರುತ್ತಾರೆ ಮತ್ತು ಕಠಿಣ ಪರಿಶ್ರಮದಲ್ಲಿ ತೊಡಗುತ್ತಾರೆ. ಉದ್ವೇಗವಿಲ್ಲದೆ ಎಲ್ಲವನ್ನೂ ಶಾಂತವಾಗಿ ಮಾಡುವ ಜನರಾಗಿ ಅವರನ್ನು ನೋಡಲಾಗುತ್ತದೆ.
ತುಲಾ ರಾಶಿಯಲ್ಲಿ ಜನಿಸಿದ ಜನರು ಸಾಮರಸ್ಯ ಮತ್ತು ಏಕತೆಯನ್ನು ಪ್ರೀತಿಸುವ ಜನರು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅವರು ಅತ್ಯುತ್ತಮ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ. ಅವರು ನಂಬಲಾಗದಷ್ಟು ಬುದ್ಧಿವಂತರು ಮತ್ತು ಅನೇಕ ಕೆಲಸಗಳನ್ನು ಮಾಡಿದ ನಂತರವೂ ಸಂತೋಷವಾಗಿರುತ್ತಾರೆ. ಅವರು ಎಲ್ಲರೊಂದಿಗೆ ಪ್ರೀತಿಯಿಂದ ಸಂವಹನ ನಡೆಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.