ಕುಂದಾಪುರ: ಕರಾವಳಿ ಜಿಲ್ಲೆಗಳಲ್ಲಿ ಮಹಿಳೆಯರು ಸಬಲರಾಗಿದ್ದಾರೆ. ಇಂದು ಯುವ ಜನಾಂಗದವರು ಶೈಕ್ಷಣಿಕವಾಗಿ ಮುಂದುವರೆದಿದ್ದರೂ ಸಾಮಾಜಿಕ ಜವಾಬ್ದಾರಿಗಳಲ್ಲಿ ಹಿಂದಿದ್ದಾರೆ ಎಂದು ಅಂಕದಕಟ್ಟೆಯ ಸರ್ಜನ್ಸ್ ಆಸ್ಪತ್ರೆ ಮಾಲಕಿ ಡಾ.ವನಿತಾಲಕ್ಷ್ಮೀ ಹೇಳಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಹಾಗೂ ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಶುಭಹಾರೈಸಿದರು. ಮಹಿಳೆಯರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಕೃಷ್ಣಾನಂದ ಚಾತ್ರ, ಮೂಕಾಂಬಿಕಾ ಉಡುಪ ಹಾಗೂ ರುಕ್ಮಿಣಿ ಪಾಟಾಳಿ ಅವರನ್ನು ಗೌರವಿಸಲಾಯಿತು. ವಿಮಲಾ ಭಟ್ ಮಹಿಳಾ ದಿನಾಚರಣೆ ಬಗ್ಗೆ ತಾವೇ ಬರೆದ ಕವನ ವಾಚಿಸಿದರು. ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ ಉಪಸ್ಥಿತರಿದ್ದರು. ಪ್ರಮುಖರಾದ ಅನಂತಪದ್ಮನಾಭ ಬಾಯರಿ, ರಘುರಾಮ್ ರಾವ್, ಶಂಕರ ರಾವ್, ಸಂದೀಪ್ ಕುಮಾರ್ ಮಂಜ, ವಿವಿಧ ವಲಯಾಧ್ಯಕ್ಷರು ಉಪಸ್ಥಿತರಿದ್ದರು. ವಸಂತಿ ಮಿತ್ಯಂತ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸೌಮ್ಯಾ ಉಡುಪ ಸನ್ಮಾನ ಪತ್ರ ವಾಚಿಸಿದರು. ಸುಧಾ ಭಟ್ ವಂದಿಸಿದರು. ಜ್ಯೋತಿ ಹೆಬ್ಬಾರ್ ನಿರೂಪಿಸಿದರು.