ಸಾಲಿಗ್ರಾಮದಲ್ಲಿ ನಾರಿಯರಿಗೆ ಗೌರವಾರ್ಪಣೆ

kota-1
Published on

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮದ ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕೂಟಬಂಧು ಭವನದಲ್ಲಿ ಇತ್ತೀಚೆಗೆ ಜರುಗಿತು.

ರಾಜ್ಯ ಭಜನಾ ತರಬೇತುದಾರೆ ಉಷಾ ಹೆಬ್ಬಾರ್ ಮಣಿಪಾಲ ಮಹಿಳಾ ದಿನಾಚರಣೆ ಮಹತ್ವ ವಿವರಿಸಿದರು. ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆಎಸ್ ಕಾರಂತ ಶುಭಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕಿ ಶಾಂತ ಭಟ್ ಪಾಂಡೇಶ್ವರ ಅವರನ್ನು ಅಭಿನಂದಿಸಲಾಯಿತು. ನಾಗರತ್ನ ಹಂದೆ, ವಸುಮತಿ ಹಂದೆ ಹಂದಟ್ಟು, ತಾರಾ ಹಂದೆ, ಸುಮತಿ ಶಾಸ್ತ್ರಿ, ಲಲಿತಾ ಹಂದೆ ಪಡುಕೆರೆ, ಪಾರ್ವತಿ ಐತಾಳ ಸಾಲಿಗ್ರಾಮ, ವಿಶಾಲಾಕ್ಷೀ ಐತಾಳ ಚಿತ್ರಪಡಿ, ರತ್ನಾವತಿ ಕೊಳ್ಳ ಪಾಂಡೇಶ್ವರ, ಸುಶೀಲಾ ಹೊಳ್ಳ ಎಂ.ಮಣೂರು, ಸುಶೀಲಾ ಅಧಿಕಾರಿ ಐರೋಡಿ ಅವರನ್ನು ಗೌರವಿಸಲಾಯಿತು.

ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ.ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಯಶೋದಾ ಉಪಾಧ್ಯ, ಪಿ.ಸಿ.ಹೊಳ್ಳ ಉಪಸ್ಥಿತರಿದ್ದರು. ಸುಮಂಗಲಿ ನಾವಡ, ಲತಾ ಹೊಳ್ಳ, ಶಿವಪ್ರಭಾ ಅಲ್ಸೆ, ಸುಜಾತಾ ಬಾಯರಿ, ವನಿತಾ ಉಪಾಧ್ಯ, ಲಲಿತಾ ಉಪಾಧ್ಯ, ಮಾಲತಿ ರಾವ್, ವಸುಧಾ ಉಡುಪ, ರೇವತಿ ಐತಾಳ, ಶ್ಯಾಮಲಾ ಐತಾಳ, ವಿನಯ ಅಲ್ಸೆ, ವಿದ್ಯಾವತಿ ಉಪಸ್ಥಿತರಿದ್ದರು. ಪೂರ್ಣಿಮಾ ಅಧಿಕಾರಿ ನಿರೂಪಿಸಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net