ಸಮುದಾಯ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ

na
Published on

ಕೊಕ್ಕರ್ಣೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ಸಮುದಾಯ ಕಾಮಗಾರಿಗಳಿಗೆ ಆದ್ಯತೆ ನೀಡಿ ಸಾಮಾಜಿಕ ಜವಾಬ್ದಾರಿ ಹಾಗೂ ಗುಣಾತ್ಮಕ ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ಅಗತ್ಯ. ಮಹಿಳೆಯರ ಪಾಲ್ಗೊಳ್ಳುವಿಕೆ ಜಿಲ್ಲೆಯಲ್ಲಿ ರಾಜ್ಯದ ಸರಾಸರಿಗಿಂತ ಉತ್ತಮವಾಗಿದ್ದು ಹೊಸತನದ ಅನುಷ್ಠಾನಕ್ಕೆ ಗರಿಷ್ಠ ಅವಕಾಶಗಳಿವೆ ಎಂದು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ಬ್ರಹ್ಮಾವರ ತಾಲೂಕು ಕಾಡೂರು ಗ್ರಾ.ಪಂ. ನಡೆದ ನರೇಗಾ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಡೂರು ಗ್ರಾ.ಪಂ. ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಯೋಜನೆ ರೂಪಿಸಿ ಪ್ರತಿ ಹಂತದಲ್ಲಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವುದರಿಂದ ಯಾವುದೇ ಯೋಜನೆ ಯಶಸ್ವೀ ಅನುಷ್ಠಾನ ಸಾಧ್ಯ ಎಂದರು.

ಜಿ.ಪಂ. ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಡಿಎಫ್‌ಒ ರವೀಂದ್ರ, ಬ್ರಹ್ಮಾವರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ, ಕಾಡೂರು ಗ್ರಾ.ಪಂ. ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ವೀಣಾ, ಪಾಂಡುರಂಗ ಶೆಟ್ಟಿ, ಅಮಿತಾ, ಗುಲಾಬಿ, ವಿಜಯ ಮರಕಾಲ, ಸತೀಶ್ ಕುಲಾಲ್, ಗಿರಿಜಾ, ನರೇಗಾ ವಿಭಾಗದ ಶ್ಯಾಮ್ ಹಾಗೂ ಪ್ರಶಾಂತ್, ಬ್ರಹ್ಮಾವರ ತಾ.ಪಂ. ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ಸಿಬ್ಬಂದಿ ಉಪಸ್ಥಿತರಿದ್ದರು. ಯಶೋಗಾಥೆಗಳ ಪ್ರದರ್ಶನ, ಫಲಾನುಭವಿಗಳು ಹಾಗೂ ಸಾಧಕ ಪಂಚಾಯಿತಿಗಳನ್ನು ಸನ್ಮಾನಿಸಲಾಯಿತು. ಪಿಡಿಒ ಮಹೇಶ್ ಕೆ. ನಿರೂಪಿಸಿದರು.

ಮನ್ ರೇಗಾ ಮತ್ತು ಸಂಜೀವಿನಿ ಯೋಜನೆಯಲ್ಲಿ ಅನಿಯಮಿತ ನಾವೀನ್ಯತೆ ಅವಕಾಶಗಳಿದ್ದು, ಹಲವು ಕುಟುಂಬಗಳ ಯಶೋಗಾಥೆ ರಾಜ್ಯಕ್ಕೆ ಮಾದರಿ. ಮಹಿಳಾ ಸ್ವಾವಲಂಬನೆ ಹಾಗೂ ಆರ್ಥಿಕ ಸುಸ್ಥಿರತೆಗೆ ಯೋಜನೆ ಸಹಕಾರಿಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕು. -ಶ್ರೀನಿವಾಸ ರಾವ್ ಜಿ.ಪಂ. ಯೋಜನಾ ನಿರ್ದೇಶಕ https://www.vijayavani.net/hatchery-to-protect-sea-turtle-eggs https://www.vijayavani.net/state-microfinance-institutions-regulation-act-dc-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net