VIDEO| ಮೆಟ್ರೋ ರೈಲಿನಲ್ಲಿ ನಿಲ್ಲುವ ಜಾಗಕ್ಕಾಗಿ ಕಿತ್ತಾಡಿಕೊಂಡ ಮಹಿಳೆಯರು

Delhi Metro
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಸಾಮಾಜಿಕ ಜಾತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಜನರು ರೀಲ್ಸ್​ ಮಾಡುವುದು, ಪ್ರೇಮಿಗಳ ಹೆಚ್ಚಾಟ ಹಾಗೂ ಹೊಡೆದಾಟಗಳ ಮೂಲಕ ಕುಖ್ಯಾತಿ ಪಡೆದಿದೆ.

ಇದೀಗ ಹೊಸ ಪ್ರಕರಣ ಒಂದರಲ್ಲಿ ನಿಲ್ಲುವ ಜಾಗ್ಕಕಾಗಿ ಇಬ್ಬರು ಮಹಿಳೆಯರು ಕಿತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವೈರಲ್​ ಆಗಿದೆ. ಘರ್​ ಕೇ ಕಲೇಶ್​ ಎಂಬುವವರು ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರಿಬ್ಬರು ನಿಂತುಕೊಳ್ಳುವ ವಿಚಾರವಾಗಿ ಪರಸ್ಪರ ಕಿತ್ತಾಡುತ್ತ ನೂಕಾಡುತ್ತಿರುವುದು ಕಂಡು ಬರುತ್ತದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸಹ ಪ್ರಯಾಣಿಕರೊಬ್ಬರು ಮಧ್ಯಪ್ರವೇಶಿಸಿ ಇಬ್ಬರ ನಡುವಿನ ಜಗಳವನ್ನು ತಿಳಿಗೊಳಿಸುತ್ತಾರೆ. ಇಷ್ಟಾದರೂ ಸುಮ್ಮನಾಗದ ಮಹಿಳೆಯರು ಪರಸ್ಪರ ಬೈದಾಡಿಕೊಳ್ಳುತ್ತಿರುವುದು ಕಂಡು ಬರುತ್ತದೆ.

ಇತ್ತ ವಿಡಿಯೋಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ವ್ಲಾಗ್​ ಮಾಡುವುದಕ್ಕಾಗಿ ದೆಹಲಿ ಮೆಟ್ರೋಗಿಂತ ಉತ್ತಮ ಸ್ಥಳ ಬೇರೊಂದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಮುಂಬೈ ಮೆಟ್ರೋ ಹಾಗೂ ಲೋಕಲ್​ ರೈಲಿನಲ್ಲಿ ಸಂಚರಿಸಿ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net