ಬೆಂಗಳೂರು:ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯವನ್ನು ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಮಾಡುತ್ತಿದೆ ಎಂದು ಶಾಸಕ ರವಿ ಸುಬ್ರಹ್ಮಣ್ಯ ಶ್ಲಾಘಿಸಿದ್ದಾರೆ.
ವಜ್ರಮಹೋತ್ಸವ ಸಂಭ್ರಮಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ (ಅವೇಕ್) ಸಹಯೋಗದಲ್ಲಿ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್, ಎನ್.ಆರ್.ಕಾಲನಿಯ ಅಶ್ವತ್ಥ್ ಕಲಾಭವನದಲ್ಲಿ ಆಯೋಜಿಸಿದ್ದ ಸಹಕಾರಿ ಸಂತೆ, ಮಹಿಳಾ ಉದ್ಯಮಿದಾರರ ಸಮಾಗಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷ ಎಂ.ಆರ್.ವೆಂಕಟೇಶ್ ನೇತೃತ್ವದಲ್ಲಿ ಠೇವಣಿದಾರರು, ಸದಸ್ಯರು ಮತ್ತು ಗ್ರಾಹಕರನ್ನು ಸೆಳೆಯುವ ಸಲುವಾಗಿ ಒಂದಿಲ್ಲೊಂದು ವಿನೂತನ ಕಾರ್ಯಕ್ರಮಗಳು ನಡೆಯುತ್ತಿವೆ. ಸಹಕಾರ ಕ್ಷೇತ್ರದ ಮುಖ್ಯ ಉದ್ದೇಶವನ್ನು ಬ್ಯಾಂಕ್ ಈಡೇರಿಸುತ್ತಿದೆ. ಸೂಕ್ತ ಮಾರುಕಟ್ಟೆ ವೇದಿಕೆ ಕಲ್ಪಿಸುವ ಮೂಲಕ ಬ್ಯಾಂಕ್, ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕರು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ನಮ್ಮ ಬ್ಯಾಂಕ್ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡಿ ವಜ್ರಾಮಹೋತ್ಸವ ಆಚರಿಸಲಾಗುತ್ತಿದೆ.ಮಹಿಳೆಯರಿಗಾಗಿ ಆನೇಕ ಯೋಜನೆಗಳನ್ನು ಪರಿಚಯಿಸಲಾಗಿದೆ. ಯಾವುದೇ ಶ್ಯೂರಿಟಿ ಇಲ್ಲದೆ ಗುಡಿ ಕೈಗಾರಿಕೆ, ಸಣ್ಣ ಉದ್ದಿಮೆ ಆರಂಭಿಸಲು 5 ಲ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದರು. ಅವೇಕ್ ಸಂಸ್ಥೆ ಅಧ್ಯೆ ಎನ್.ಆರ್.ಅಶಾ ಮಾತನಾಡಿ,ರಾಜ್ಯದಲ್ಲಿ ಮಹಿಳಾ ಉದ್ಯಮಶೀಲತೆ ಬೆಳೆಸಲು ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ದೊಡ್ಡ ಮಹಿಳಾ ಉದ್ದಿಮೆಗಳಿಂದ ಸ್ಫೂರ್ತಿ ಪಡೆದು ರಾಜ್ಯದಲ್ಲೆಡೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವಾರ ಬಿಸಿನೆಸ್ ಕೌನ್ಸಿಲಿಂಗ್ ಮಾಡುತ್ತಿದ್ದೇವೆ. ಮಹಿಳೆಯರು ಸಂಸ್ಥೆಗೆ ಭೇಟಿ ನೀಡಿದರೆ ಎಲ್ಲ ಮಾಹಿತಿ ದೊರೆಯಲಿದೆ. ಸಹಕಾರಿ ಬ್ಯಾಂಕ್ಗಳಲ್ಲಿ ನೀಡುತ್ತಿರುವ ಸಾಲ ಸೌಲಭ್ಯವನ್ನು ಮಹಿಳಾ ಉದ್ದಿಮೆಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸಹಕಾರಿ ಸಂತೆಯಲ್ಲಿ ಉಡುಪುಗಳು,ದಿನನಿತ್ಯ ಬಳಕೆ ಪದಾರ್ಥಗಳ ಸೇರಿ 50ಕ್ಕೂ ಅಧಿಕ ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಸಾರ್ವಜನಿಕರು ಭೇಟಿ ನೀಡಿ ವಿವಿಧ ವಸ್ತುಗಳನ್ನು ಖರೀದಿಸಿದರು. ಹಿರಿಯ ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಸೇರಿ ಮತ್ತಿತರರಿದ್ದರು.
ಗದಗ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಗದ್ದುಗೆ ಗುದ್ದಾಟ
ನಿಗಮದಿಂದಲೂ ಹಲವು ಕಾರ್ಯಕ್ರಮ:
ಮಹಿಳಾ ಉದ್ದಿಮೆದಾರರನ್ನು ಗುರುತಿಸುವ ಕೆಲಸವನ್ನು ಬ್ಯಾಂಕ್ ಮಾಡುತ್ತಿದೆ. ಕೆಲ ಸಹಕಾರಿ ಸಂಸ್ಥೆಗಳು ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಸಶಕ್ತಗೊಳಿಸಲು ಸಾಲ ನೀಡುತ್ತಿದ್ದೇವೆ. ಅವೇಕ್ ಸಂಸ್ಥೆ ಸಹ 40 ವರ್ಷಗಳಿಂದ ಮಹಿಳಾ ಉದ್ದಿಮೆಗಳಿಗೆ ಆರ್ಥಿಕವಾಗಿ ಸಧೃಡವಾಗಿಸಲು ಶ್ರಮಿಸುತ್ತಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯೆ ಜಿ. ಪದ್ಮಾವತಿ ಹೇಳಿದರು. ನಮ್ಮ ನಿಗಮದಿಂದ ನೀಡುವ ಸಾಲ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡ ಸಾಕಷ್ಟೂ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ನಿಗಮದಿಂದ ನೀಡುವ ಸಾಲ ಸೌಲಭ್ಯವನ್ನು ಮಹಿಳಾ ಉದ್ದಿಮೆದಾರರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೀಣ್ಯ ಭಾಗದಲ್ಲಿ ಸಾಕಷ್ಟು ಮಹಿಳೆಯರು ಉದ್ದಿಮೆಯಾಗಿ ಬೆಳೆದಿದ್ದಾರೆ. ದಾಬಸ್ಪೇಟೆ ಬಳಿ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗಾಗಿ ಹಾಗೂ ಮಹಿಳೆಯರಿಗಾಗಿ ಕೈಗಾರಿಕಾ ಪಾರ್ಕ್ ನಿರ್ಮಿಸಬೇಕು. ಈ ಬಗ್ಗೆ ಶಾಸಕ ರವಿ ಸುಬ್ರಹ್ಮಣ್ಯ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕೆಲಸ ಮಾಡಿಕೊಟ್ಟರೆ ನಮಗೆ ಅನುಕೂಲವಾಗಲಿದೆ. ಜಾಗತಿಕ ಶೃಂಗಸಭೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಮಳಿಗೆ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು.
|ಆರ್.ಶಿವಕುಮಾರ್. ಪೀಣ್ಯ ಕೈಗಾರಿಕಾ ಸಂಘ ಅಧ್ಯಕ್ಷ.