Bikinis : ಸಾಮಾನ್ಯವಾಗಿ ಬೀಚ್ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ ದೇಶ ಮತ್ತು ರಾಜ್ಯಗಳಲಲ್ಲಿ ಅಂದರೆ ಗೋವಾ, ಮಂಗಳೂರು, ಮಲ್ಪೆ ಸೇರಿದಂತೆ ರಾಷ್ಟ್ರದ ಇತರೆ ಪ್ರದೇಶದ ಕಡಲ ತೀರದ ಪ್ರದೇಶಗಳಲ್ಲಿ ವಿದೇಶಿ ಮಹಿಳೆಯರು ಬಿಕಿನಿ ಧರಿಸಿಕೊಂಡು ಫೋಟೊಗಳಿಗೆ ಪೋಸ್ ನೀಡಿ ಸಂತೋಷಿಸುತ್ತಾರೆ. ಹೀಗೆಯೇ ಕೆಲ ಪ್ರದೇಶಗಳಲ್ಲಿ ಬಿಕಿನಿ ಧರಿಸಿದರೆ ಕಠಿಣ ಶಿಕ್ಷೆ ಜತೆ ಭಾರೀ ಮೊತ್ತದ ದಂಡ ವಿಧಿಸುತ್ತಾರೆ. ಎಲ್ಲಿ? ಯಾಕೆ? ಎಂಬುದು ನೋಡೋಣ..
ಹೌದು ಅನೇಕ ದೇಶಗಳಲ್ಲಿ ಬಿಕಿನಿ ಧರಿಸುವುದನ್ನು ನಿಷೇಧಿಸಲಾಗಿದೆ. ಸ್ಪೇನ್ನ ಬ್ಯಾರ್ಸಿಲೋನಿಯ ನಗರ ತುಂಬಾ ಸುಂದರನಗರವಾಗಿದೆ. ಇಲ್ಲಿಗೆ ದಿನನಿತ್ಯ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇಶದ ಬೀದಿಗಳಲ್ಲಿ ಬಿಕಿನಿ ಧರಿಸುವುದನ್ನು ನಿಷೇಧಿಸಲಾಗಿದೆ. ಬೀಚ್ಗಳಲ್ಲಿ ಮಾತ್ರ ಬಿಕಿನಿ ಧರಿಸಬೇಕು. ಬೇರೆಕಡೆಗಳಲ್ಲಿ ಧರಿಸಿದ್ರೆ ಭಾರೀ ಮೊತ್ತದ ದಂಡ ವಿಧಿಸುತ್ತದೆ.
ಯುನೈಟೈಡ್ ಅರಬ್ ರಾಷ್ಟ್ರಗಳಲ್ಲಿ ಎಲ್ಲಿಯೂ ಬಿಕಿನಿ ಧರಿಸುವಂತಿಲ್ಲ. ಅಲ್ಲದೆ, ಕಡಲ ತೀರದಲ್ಲಿಯೂ ಮಹಿಳೆಯರರು ಬಿಕಿನಿ ಸೇರಿದಂತೆ ಪುರುಷರು ಗಿಡ್ಡಚಡ್ಡಿ(ಶಾರ್ಟ್ಸ್)ಗಳನ್ನು ಧರಿಸುವಂತಿಲ್ಲ.
ಪ್ರಪಂಚದ್ಯಾಂತ ಪ್ರವಾಸಿಗ ನೆಚ್ಚಿನ ತಾಣವಾದ ಮಾಲ್ಡೀವ್ಸ್ ಕೂಡ ಬಿಕಿನಿಗಳಿಗೆ ಕೂಡ ಕೆಲ ನಿಯಮಗಳು ಕೂಡ ಜಾರಿಯಲ್ಲಿದೆ. ಇಲ್ಲಿ ಕೂಡ ಕಡಲ ತೀರಗಳಲ್ಲಿ ಬಿಕಿನಿ ಹಾಕುವಂತಿಲ್ಲ ಮತ್ತು ದೇಹವನ್ನು ಪ್ರದರ್ಶಿಸುವಂತಿಲ್ಲ. ಅದಗ್ಯೂ ಕೆಲ ಖಾಸಗಿ ಪ್ರದೇಶಗಳಲ್ಲಿ ಮಾತ್ರ ಇದಕ್ಕೆ ಅವಕಾಶ ಇದೆ.
ಕ್ರೊಯೇಷಿಯಾದ ಸುಂದರ ಹ್ವಾರ್ ದ್ವೀಪದಲ್ಲಿ ಪುರುಷರು ಮತ್ತು ಮಹಿಳೆಯರು ಗಿಡ್ಡ ಬಟ್ಟೆ ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಸ್ವಿಟ್ಜರ್ಲ್ಯಾಂಡ್ನ ಜೀನಿವವಾದಲ್ಲಿ ಕೂಡ ನಿಷೇಧವಿದೆ. ಮಹಿಳೆಯರ ಹಿತದೃಷ್ಠಿಯಿಂದ ಮತ್ತು ಅಯಾ ದೇಶ ನಿಯಮಗಳ ಅನುಸಾರವಾಗಿ ನಿಷೇಧ ಮಾಡಲಾಗಿದೆ.(ಏಜೆನ್ಸೀಸ್)
ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದಕ್ಕಾಗಿ ಭಾರೀ ನಷ್ಟ!; ಪಾಕಿಸ್ತಾನಕ್ಕೆ ನಷ್ಟವಾಗಿದ್ದರೂ ಹೇಗೆ? | Champions Trophy
ಮಾರುಕಟ್ಟೆಯಲ್ಲಿ ತಂದ ತುಪ್ಪ ಅಸಲಿಯೋ, ನಕಲಿಯೋ?; ಈ 3 ವಿಧಾನಗಳಿಂದ ಸುಲಭವಾಗಿ ಕಂಡುಹಿಡಿಯಿರಿ | Ghee