

Champions Trophy: ಸಾಮಾನ್ಯವಾಗಿ ವಿವಿಧ ದೇಶಗಳಲ್ಲಿ ಟ್ರೋಫಿ ಆಯೋಜಿಸಲು ಮುಖ್ಯ ಕಾರಣ ಲಾಭದ ಉದ್ದೇಶ ಮತ್ತು ದೇಶದ ಗೌರವಕ್ಕಾಗಿ. ಹೀಗಾಗಿ, ಪ್ರತಿ ದೇಶಗಳಲ್ಲಿ ಕೆಲ ವರ್ಷಗಳೊಮ್ಮೆ ಟೂರ್ನಿ ನಡೆಸುತ್ತಾರೆ. ಇತ್ತೀಚಿಗೆ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯನ್ನು ಪಾಕಿಸ್ತಾನ ಭರ್ಜರಿ ಆಯೋಜಿಸಿತ್ತು. ಆದರೆ, ಪಾಕಿಸ್ತಾನಕ್ಕೆ ಇದರಲ್ಲಿ ಲಾಭಕ್ಕಿಂತ ಅಧಿಕ ನಷ್ಟವೇ ಉಂಟಾಗಿದೆ.
ಹೌದು, ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ಮಾ.09ರಂದು ನ್ಯೂಜಿಲೆಂಡ್ ಮತ್ತು ಭಾರತ ನಡುವೆ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತ್ತು. ಭಾರತದ ಈ ಗೆಲುವು ಪಾಕಿಸ್ತಾನಕ್ಕೆ ತೀವ್ರ ನೋವುಂಟು ಮಾಡಿದೆ. 29 ವರ್ಷಗಳ ನಂತರ ಐಸಿಸಿ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಯಿತ್ತು. ಈ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನ ನೀರಿನಂತೆ ಹಣವನ್ನು ಖರ್ಚು ಮಾಡಿದೆ.
ಅಲ್ಲದೆ, ರಾಜತಾಂತ್ರಿಕ ಕಾರಣದಿಂದ ಭಾರತ ಅಲ್ಲಿ ಆಡಲು ನಿರಾಕರಿಸಿತು. ಇದಾದ ನಂತರ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆದವು ಮತ್ತು ಇದು ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಪಾಕಿಸ್ತಾನಕ್ಕೆ ಇದು ಬೇಕಿತ್ತಾ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ವಾಸ್ತವಾಗಿ ಭಾರತದಲ್ಲಿ ಕ್ರಿಕೆಟ್ ಅಭಿಮಾನಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಹೊರ ದೇಶಗಳಲ್ಲಿ ಕೂಡ ಅಪಾರ ಫ್ಯಾನ್ಸ್ಗಳು ಹೊಂದಿದ್ದಾರೆ. ಆದ್ದರಿಂದ ಪಂದ್ಯದ ಸಮಯದಲ್ಲಿ ಹೆಚ್ಚಿನ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಾಗ ಉತ್ತಮ ಪ್ರಮಾಣದ ಆದಾಯ ಕೂಡ ಬರುತ್ತದೆ. ಆದರೆ, ಭಾರತ ಪಾಕಿಸ್ತಾನದಲ್ಲಿ ಆಡಲು ನಿರಾಕರಿದ್ದರಿಂದ ಆದಾಯದಲ್ಲಿ ಪಾಕಿಸ್ತಾನ ಕೆಟ್ಟ ಸ್ಥಿತಿಗೆ ತಲುಪಿತು. ಅಲ್ಲದೆ, ಪಾಕಿಸ್ತಾನ ತಂಡ ಮೊದಲೇ ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಉಳಿದ ಪರಿಸ್ಥಿತಿಯನ್ನು ಪಾಕಿಸ್ತಾನವೇ ಇನ್ನಷ್ಟು ಹದಗೆಡಿಸಿತು. ಅಂತಹ ಪರಿಸ್ಥಿತಿಯಲ್ಲಿ, ಕಡಿಮೆ ಪ್ರೇಕ್ಷಕರು ಬಂದರು ಮತ್ತು ಎಲ್ಲಾ ಟಿಕೆಟ್ಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಪಾಕಿಸ್ತಾನ ನಷ್ಟ ಅನುಭವಿಸಿತು.
ಒಂದು ವರದಿಯ ಪ್ರಕಾರ, ಪಾಕಿಸ್ತಾನಕ್ಕೆ ಐಸಿಸಿಯಿಂದ ಆತಿಥೇಯ ಶುಲ್ಕವಾಗಿ 52 ಕೋಟಿ ರೂ. ಅಂದರೆ 6 ಮಿಲಿಯನ್ ಡಾಲರ್ಗಳು ಸಿಗಲಿವೆ. ಏಕೆಂದರೆ ಪಾಕಿಸ್ತಾನ ಟಿಕೆಟ್ ಮಾರಾಟದಿಂದ ಹೆಚ್ಚುಗಳಿಸಿಲ್ಲ. ವಿದೇಶಿ ಪ್ರೇಕ್ಷಕರು ಕೂಡ ಕಡಿಮೆ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ ಆಗಮಿಸಿದರು. ಈ ಕಾರಣದಿಂದಾಗಿ ಪಂದ್ಯಾವಳಿಯು ಪಾಕಿಸ್ತಾನ ಖರ್ಚು ಮಾಡಿದಷ್ಟು ಹಣವನ್ನು ಗಳಿಸಲಿಲ್ಲ. ಇದರಿಂದಾಗಿ ಪಾಕಿಸ್ತಾನಕ್ಕೆ ಸುಮಾರು 195 ಕೋಟಿ ರೂ. ನಷ್ಟವಾಗಿದೆ.(ಏಜೆನ್ಸೀಸ್)