ಈ ಮುಸ್ಲಿಂ ದೇಶಗಳಲ್ಲಿ ಮಹಿಳೆಯರು ಬುರ್ಖಾ ಧರಿಸುವಂತಿಲ್ಲ: ನಿಷೇಧದ ನಡುವೆಯೂ ಧರಿಸಿದ್ರೆ ಬೀಳುತ್ತೆ ಭಾರೀ ದಂಡ | Burqas Ban

dk - 2025-07-04T201249.597
Published on

Burqas Ban: ಬಹುತೇಕ ಮುಸ್ಲಿಂ ದೇಶಗಳಲ್ಲಿ ಮಹಿಳೆಯರು ಬುರ್ಖಾ ಧರಿಸುವುದು ಕಡ್ಡಾಯವಾಗಿದ್ದರೂ ಕೆಲ ರಾಷ್ಟ್ರಗಳಲ್ಲಿ ಬುರ್ಖಾ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೌದು, ಇದೀಗ ಭಾರತದ ಬಹು ಹತ್ತಿರದಲ್ಲಿರುವ ಕಝಕಿಸ್ತಾನದಲ್ಲಿ ಮಹಿಳೆಯರು ಬುರ್ಖಾ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಝಾಕಿಸ್ತಾನ್ ಸರ್ಕಾರವು ಮಹಿಳೆಯರು ಬುರ್ಖಾ ಅಥವಾ ಹಿಜಾಬ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೋಕಾಯೆವ್ ಈ ಆದೇಶ ಹೊರಡಿಸಿದ್ದಾರೆ. ಆದರೆ, ಬುರ್ಖಾ ನಿಷೇಧ ಮಾಡಿದ ದೇಶ ಇದೇ ಮೊದಲಲ್ಲ. ಇದಕ್ಕೂ ಮೊದಲು ಅನೇಕ ದೇಶಗಳಲ್ಲಿಯೂ ಸಹ, ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ.

ಬುರ್ಖಾ ನಿಷೇಧ..!

ಮೊದಲು ಬುರ್ಖಾ ಎನ್ನುವ ಪದ ಅರೇಬಿಕ್​ ಭಾಷೆಯದ್ದಾಗಿದೆ. 7ನೇ ಶತಮಾನದಲ್ಲಿ ಈ ಪದ ಬಳಕೆಗೆ ಬಂದಿದೆ. ಮಹಿಳೆಯರು ಬುರ್ಖಾ ಧರಿಸಿದ ಮೊದಲ ದೇಶ ಇರಾನ್​ ಎಂದು ಇತಿಹಾಸಕಾರರು ನಂಬುತ್ತಾರೆ. ಆದರೆ, ಇನ್ನು ಕೆಲ ತಜ್ಞರು ಅರಬ್​ ರಾಷ್ಟ್ರಗಳಲ್ಲಿ ಮೊದಲು ಧರಿಸಿದ್ದು, ಎಂದು ವಾದ ಮಾಡುತ್ತಾರೆ. ಆದರೆ, ಇದೀಗ ಅನೇಕ ಮುಸ್ಲಿಂ ರಾಷ್ಟ್ರಗಳು ಬುರ್ಖಾವನ್ನು ನಿಷೇಧಿಸುತ್ತಿವೆ. ಅಲ್ಜೀರಿಯಾ, ಟುನೀಶಿಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್, ಚಾಡ್ ಸೇರಿದಂತೆ ಮುಸ್ಲಿಂ ರಾಷ್ಟ್ರಗಳು ಬುರ್ಖಾವನ್ನು ನಿಷೇಧಿಸಿವೆ. ಇಲ್ಲಿ ಬುರ್ಖಾ ಧರಿಸುವ ಬಗ್ಗೆ ಕಠಿಣ ಕಾನೂನುಗಳಿವೆ.

ಬುರ್ಖಾವನ್ನು ನಿಷೇಧಿಸಿದ ಯುರೋಪಿನ ಮೊದಲ ದೇಶ ಫ್ರಾನ್ಸ್. ಇಲ್ಲಿ, ಬುರ್ಖಾ ಧರಿಸುವ ಮಹಿಳೆಯರಿಗೆ 150 ಯುರೋಗಳ ದಂಡವಿದೆ. ಒಬ್ಬ ವ್ಯಕ್ತಿಯು ಮಹಿಳೆಯರನ್ನು ಬುರ್ಖಾ ಧರಿಸಲು ಒತ್ತಾಯಿಸಿದರೆ, ಅವನ ಮೇಲೆ 30,000 ಯುರೋಗಳ ದಂಡ ವಿಧಿಸಲಾಗುತ್ತದೆ.

ಫ್ರಾನ್ಸ್ ಹೊರತುಪಡಿಸಿ, ಬೆಲ್ಜಿಯಂ, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ಬಲ್ಗೇರಿಯಾ, ಜರ್ಮನಿ ಮತ್ತು ಇಟಲಿ ಕೂಡ ಬುರ್ಖಾ ಧರಿಸುವುದನ್ನು ನಿಷೇಧಿಸಿರುವ ದೇಶಗಳಲ್ಲಿ ಸೇರಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net