ಅವಳಿ ಮಕ್ಕಳಿಗೆ ಭರ್ಜರಿ ಮದುವೆ ಮಾಡಿಸಿದ ತಾಯಿ! ಏನಿದು ಸಂಪ್ರದಾಯ?: ಇಲ್ಲಿದೆ ನೋಡಿ ವಿಡಿಯೋ.. | Wedding To Twins

dk - 2025-07-04T174933.197
Published on

Wedding To Twins: ಒಂದೇ ತಾಯಿ ಗರ್ಭದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಇತ್ತೀಚಿಗೆ ಥೈಲ್ಯಾಂಡ್​​ನಲ್ಲಿ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ನೆಟ್ಟಿಗರು ಕೂಡ ಅಚ್ಚರಿಗೆ ಒಳಗಾಗಿದ್ದಾರೆ.

ಹೌದು, ಇದೇ ಜೂ.28ರಂದು ಥೈಲ್ಯಾಂಡಿನ ಕಲಾಸಿನ್​​ನಲ್ಲಿರುವ ರೆಸಾರ್ಟ್​​ನಲ್ಲಿ ಈ ಅವಳಿ ಮಕ್ಕಳ ಅದ್ದೂರಿ ಬೌದ್ಧ ಸಂಪ್ರಾದಯಂತೆ ಮದುವೆ ನಡೆದಿದೆ. ಇನ್ನು ಮದುವೆಯಾದ ಅವಳಿಗಳಿ ಮಕ್ಕಳನ್ನು ಥಟ್ಸಾನಪೋರ್ನ್​ ಸೂರ್ನ್​ ಚೈ ಹಾಗೂ ಥಟ್ಸಾನಪೋರ್ನ್​ ಹೆಸರಿನ ಅಣ್ಣ -ತಂಗಿ ಎಂದು ಗುರುತಿಸಲಾಗಿದೆ. ಈ ಮದುವೆಯಲ್ಲಿ ಕುಟುಂಬದ ಸದ್ಯಸರು ಸೇರಿದಂತೆ ದೊಡ್ಡ ಮಂದಿಯಲ್ಲ ಭಾಗಿಯಾಗಿದ್ದು, ಅವಳಿ ಜೋಡಿ ದಂಪತಿಗಳನ್ನು ಅಶಿರ್ವಾದಿಸಿರುವುದು ವಿಡಿಯೋದಲ್ಲಿ ನೋಡಬಹುದು.

ಈ ವೀಡಿಯೊವನ್ನು @Mustsharenews ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. 4 ವರ್ಷದ ವಧು ತನ್ನ ಅವಳಿ ಸಹೋದರ ಮತ್ತು ವರನ ಕೆನ್ನೆಗಳಿಗೆ ಒಂದು ಆಚರಣೆಯಾಗಿ ಮುತ್ತಿಡುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ವೀಡಿಯೊದಲ್ಲಿ ಅವರು ವಿವಾಹ ವಿಧಿಗಳನ್ನು ನಿರ್ವಹಿಸುವುದನ್ನು ಕಾಣಬಹುದು. ಹಲವಾರು ಬೌದ್ಧ ಸನ್ಯಾಸಿಗಳು ತಮ್ಮ ವಿಶಿಷ್ಟ ಆಚರಣೆಗಳೊಂದಿಗೆ ದಂಪತಿಗಳನ್ನು ಆಶೀರ್ವದಿಸುತ್ತಾರೆ.

1 ಕೋಟಿ ರೂ. ವರದಕ್ಷಿಣೆ..!

ಇನ್ನು ಅದ್ದೂರಿಯಾಗಿ ಮದುವೆ ಮಾಡಿದ ಈ ಕುಟುಂಬ ಹುಡುಗಿ ಕಡೆಯಿಂದ ವರನಿಗೆ 4 ಮಿಲಿಯನ್​​ ಬಹ್ತ್​​ ಕೊಡಲಾಗಿದೆ. ಅಂದ್ರೆ ಭಾರತೀಯ ರೂ,ಗಳಲ್ಲಿ ಬರೊಬ್ಬರಿ 1,05,58,228 ರೂ. ನೀಡಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿದ ಈ ಅವಳಿಗಳ ತಾಯಿ ಜಾಂಗ್‌ಕಾನ್ ಸೊನಾಚಿ, ಈ ಅವಳಿಗಳು ಜೂನ್ 14ರಂದು ಜನಿಸಿದ್ದವು. ಈಗ ಮಕ್ಕಳಿಗೆ 4 ವರ್ಷ ತುಂಬಿದೆ. ಅವರು 14ನೇ ತಾರೀಕಿನಂದು ಜನಿಸಿದ್ದರಿಂದ ಮದುವೆಯನ್ನು 28ಕ್ಕೆ ಅದ್ದೂರಿಯಾಗಿ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಏನಿದು ಈ ವಿಚಿತ್ರ ಸಂಪ್ರದಾಯ..?

ಥೈಲ್ಯಾಂಡ್​ನಲ್ಲಿ ಬೌದ್ಧ ಧರ್ಮದ ಪ್ರಕಾರ ಒಂದೇ ಗರ್ಭದಲ್ಲಿ ಅವಳಿ ಮಕ್ಕಳು(ಗಂಡು-ಹೆಣ್ಣು) ಜನಿಸಿದ್ರೆ ಅವು ಹಿಂದಿನ ಜನ್ಮದಲ್ಲಿ ಪ್ರೇಮಿಗಳು ಆಗಿರುತ್ತಾರೆ. ಹೀಗಾಗಿ, ಅವರಿಗೆ ಬೇಗ ಮದುವೆ ಮಾಡಿಸಬೇಕು. ಇಲ್ಲವಾದರೆ ದೀರ್ಘಕಾಲದವರೆಗೆ ಅವಳಿ ಮಕ್ಕಳು ಅನಾರೋಗ್ಯಕ್ಕಿಡಾಗುತ್ತದೆ. ಅಲ್ಲದೆ ಅವರು ಸಾಯಲುಬಹುದು ಎಂದು ನಂಬಲಾಗಿದೆ. ಹೀಗಾಗಿ, ಮದುವೆ ಮಾಡದಿದ್ರೆ ಕಷ್ಟಗಳೇ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net