ಮಂಗಳೂರು : ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ಮಂಗಳೂರು- 2ನೇ ಘಟಕದಿಂದ ನೂತನವಾಗಿ ಮಂಗಳೂರು ಕಾಸರಗೋಡು ಮಾರ್ಗದಲ್ಲಿ ಹೊಸದಾಗಿ ರಾಜಹಂಸ ಸೂಪರ್ ಫಾಸ್ಟ್ ಸಾರಿಗೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲು ಯೋಜಿಸಲಾಗಿರುತ್ತದೆ. ತೊಕ್ಕೊಟ್ಟು, ಬೀರಿ, ತಲಪಾಡಿ, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕೈಕಂಬ, ನಯಾಬಜಾರ್, ಬಂದ್ಯೋಡು, ಕುಂಬ್ಳೆಗೆ ಪ್ರಾಯಣ ಇದೆ. ಸಾರ್ವಜನಿಕ ಪ್ರಯಾಣಿಕರು ನೂತನ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.