ಮಧ್ಯಪ್ರದೇಶ: ಮಹಿಳೆಯನ್ನು ಕೊಂದು ತುಂಡು ತುಂಡು ಮಾಡಿ ರೈಲಿನಲ್ಲಿಟ್ಟ ದುಷ್ಕರ್ಮಿಗಳು!

1 Min Read
indore

ಇಂದೋರ್: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಬಿಟ್ಟು ಹೋದ ಪ್ರಕರಣವೊಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ!

ಒಂದು ಅಥವಾ ಎರಡು ದಿನಗಳ ಹಿಂದೆ ಮಹಿಳೆಯನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕತ್ತರಿಸಿ ಬ್ಯಾಗ್‍ನಲ್ಲಿ ತುಂಬಿ ಶನಿವಾರ ರಾತ್ರಿ ರೈಲಿನಲ್ಲಿ ತಂದು ಇರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚೀಲದಲ್ಲಿ ಮಹಿಳೆಯ ಕೈ ಹಾಗೂ ಕಾಲುಗಳು ಪತ್ತೆಯಾಗಿಲ್ಲ. ಚೀಲಗಳನ್ನು ವಶಕ್ಕೆ ಪಡೆದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಶವವನ್ನು ಶನಿವಾರ ರಾತ್ರಿ ರೈಲಿನಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ರೈಲಿನ ಸ್ವಚ್ಛತಾ ಸಿಬ್ಬಂದಿ ಬೋಗಿಯ ಒಳಗೆ ಸ್ವಚ್ಛಗೊಳಿಸುತ್ತಿದ್ದಾಗ ಮಹಿಳೆಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆಯಾದ ಮಹಿಳೆ ಸುಮಾರು 20 ರಿಂದ 25 ವರ್ಷ ವಯಸ್ಸಿನವಳೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಮಹಿಳೆಯ ದೇಹದ ಮೇಲಿನ ಭಾಗವು ರೈಲಿನಲ್ಲಿ ಬಿಟ್ಟ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದೆ, ಆದರೆ ಸೊಂಟದ ಕೆಳಗಿನ ದೇಹದ ಭಾಗವು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಆಕೆಯ ಎರಡೂ ಕೈಗಳು ಮತ್ತು ಕಾಲುಗಳು ಕಾಣೆಯಾಗಿವೆ ಎಂದು ಶುಕ್ಲಾ ಹೇಳಿದರು. ಮಹಿಳೆಯ ಗುರುತು ಪತ್ತೆಗೆ ಪ್ರಯತ್ನಗಳು ನಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರೇಂದ್ರ ಮೋದಿ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ಸೂಪರ್ ಸ್ಟಾರ್​ ರಜನೀಕಾಂತ್!

See also  ಜೈಲಿಗೆ ಹೋಗುವ ವೇಳೆ ಅಭಿಮಾನಿಗಳ ಅಭಿಮಾನಕ್ಕೆ ದಾಸನ ಪ್ರತಿಕ್ರಿಯೆ
Share This Article