More

    ಸುಡು ಬಿಸಿಲಿನಿಂದ ಮಕ್ಕಳನ್ನು ರಕ್ಷಿಸಲು ಪಾದಗಳಿಗೆ ಪ್ಲಾಸ್ಟಿಕ್ ಸುತ್ತಿದ ತಾಯಿ

    ಭೋಪಾಲ್: ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಜನರು ತಂಪುಪಾನಿ ಹಾಗೂ ಫ್ಯಾನ್​, ಎಸಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇಲ್ಲೊಬ್ಬಳು ತಾಯಿ ಬಿಸಿಲಿಗೆ ಮಕ್ಕಳ ಕಾಲುಗಳನ್ನು ರಕ್ಷಣೆ ಮಾಡಿದ ಕಥೆ ಕೇಳಿದ್ರೆ ಕಣ್ಣಂಚಲಿ ನೀರು ಬರುವುದು ಖಂಡಿತಾ ಹೌದು.

    ಮಧ್ಯಪ್ರದೇಶದಲ್ಲಿ ಸುಡು ಬಿಸಿಲಿನ ನಡುವೆ ಚಪ್ಪಲಿ ಖರೀದಿಸಲಾಗದ ತಾಯಿಯೊಬ್ಬರು ಕಾದ ಕಾವಲಿಯಂತಿರುವ ರಸ್ತೆಗಳಿಂದ ತನ್ನ ಮಕ್ಕಳನ್ನು ರಕ್ಷಿಸಲು ಒಂದು ಉಪಾಯ ಮಾಡಿದ್ದಾರೆ. ಮಕ್ಕಳ ಪಾದಗಳಿಗೆ ಪ್ಲಾಸ್ಟಿಕ್ ಕವರ್ ಸುತ್ತಿದ್ದಾರೆ. ಈ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

    ಮಧ್ಯಪ್ರದೇಶದ ಶಿಯೋಪುರದಲ್ಲಿ ಮೇ 21 ರಂದು ಮಹಿಳೆ ತನ್ನ ಮಕ್ಕಳ ಪಾದಗಳಿಗೆ ಪ್ಲಾಸ್ಟಿಕ್ ಕವರ್‌ಗಳನ್ನು ಸುತ್ತುವ ಮೂಲಕ ಬಿಸಿಲಿನ ಶಾಖದಿಂದ ರಕ್ಷಿಸಿದರು. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯ ಪತ್ರಕರ್ತ ಇನ್ಸಾಫ್ ಖುರೈಶಿ ಮಹಿಳೆಯನ್ನು ಗಮನಿಸಿ ಛಾಯಾಚಿತ್ರ ಸೆರೆ ಹಿಡಿದಿದ್ದಾರೆ.

     ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್​ ಅಧ್ಯಕ್ಷರಾಗಿ ಕನ್ನಡಿಗ ಗೋವಿಂದರಾಜ್​ ಆಯ್ಕೆ

    ಈಕೆ ಪತಿ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಕೆಲಸಕ್ಕಾಗಿ ಅಲೆಯುತ್ತಿದ್ದು, ತನ್ನ ಮೂವರು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಅವರನ್ನು ಕರೆದುಕೊಂಡು ಬಿಸಿಲಿನಲ್ಲೇ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಖುರೈಷಿ ಅವರು ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪಾದರಕ್ಷೆಗಳನ್ನು ಖರೀದಿಸಲು ಹಣವನ್ನು ಒದಗಿಸುವ ಮೂಲಕ ಸಹಾಯ ಹಸ್ತವನ್ನು ಚಾಚಿದ್ದಾರೆ.

    ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ತಿಳಿದ ಸ್ಥಳೀಯ ಆಡಳಿತವು ತಕ್ಷಣವೇ ರುಕ್ಮಿಣಿ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದೆ.

    ಕೆಮ್ಮಿನ ಸಿರಪ್ ರಫ್ತಿಗೆ ಪರೀಕ್ಷೆ ಕಡ್ಡಾಯ; ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts