

ಹತ್ತು ಹಲವು ಔಷಧಗಳು, ಸ್ಟಿರಾಯ್್ಡ ಅತೀವ ನೋವಿನ ಮಧ್ಯೆ ನಾನು ಬದುಕುವ ಆಸೆಯನ್ನೇ ಕೈಬಿಟ್ಟಿದ್ದೆ. ಎಲ್ಲರಂತೆ ಸಾಮಾನ್ಯ ಜೀವನ ನಡೆಸುವುದು ಕಷ್ಟ ಎಂದುಕೊಂಡಿದ್ದೆ. ಕಾಲ ಕ್ರಮೇಣ ಉತ್ತಮ ಜೀವನಶೈಲಿ ರೂಢಿಸಿಕೊಂಡಿದ್ದರಿಂದ ಜೀವನ ಮೊದಲಿನಂತಾಯಿತು ಎನ್ನುವ ಖಾಸಗಿ ಕಂಪನಿಯೊಂದರಲ್ಲಿ ತರಬೇತಿ ಮುಖ್ಯಸ್ಥೆಯಾಗಿರುವ ಪಂಜಾಬ್ ಮೂಲದ ಅನುಪಮಾ ಡಿಡ್ಡಿ ಅಸ್ತಮಾ ಗೆದ್ದು 50ನೇ ವಯಸ್ಸಿನಲ್ಲಿ ಪರ್ವತವೇರಿ ಸಾಹಸ ಮೆರೆದಿದ್ದಾರೆ. ಅವರ ಅನುಭವ ಕಥನ ಇಲ್ಲಿದೆೆ.
ಅಸ್ತಮಾ ಬಗ್ಗೆ ಅರಿವೇ ಇರದ ನನಗೆ 1988ರಲ್ಲಿ ಮೊದಲ ಬಾರಿಗೆ ಅಸ್ತಮಾ ಕಾಣಿಸಿಕೊಂಡಾಗ ಏನು ಮಾಡಬೇಕು ಎನ್ನುವ ಗೊಂದಲವಾಗಿದ್ದು ನಿಜ. ಪ್ರಾರಂಭದಲ್ಲಿ ಕಾಯಿಲೆಯನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಔಷಧ ಪಡೆದಿದ್ದರಿಂದ ಆರೋಗ್ಯ ಸಹಜಸ್ಥಿತಿಗೆ ಬಂದಿತ್ತು. ಆದರೆ 1993ರಲ್ಲಿ ಕಾಯಿಲೆ ನನ್ನನ್ನು ಇನ್ನಷ್ಟು ಕುಗ್ಗುವಂತೆ ಮಾಡಿತು. ಕೊಂಚ ನಡೆದರೂ ಉಸಿರುಗಟ್ಟುವಂತಾಗುತ್ತಿತ್ತು. ವಿಪರೀತ ಸುಸ್ತಾಗಿ ಬೀಳುವಂತಾಗುತ್ತಿತ್ತು. ಇದರಿಂದ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಸಹ ಕುಗ್ಗಿ ಹೋಗಿದ್ದೆ. ನಂತರ ನಾನೇ ನಿರ್ಧಾರ ಮಾಡಿದೆ. ಔಷಧದಿಂದ ತಾತ್ಕಾಲಿಕವಾಗಿ ಆರೋಗ್ಯ ಸುಧಾರಿಸಬಹುದು. ಆದರೆ ಇದೇ ಶಾಶ್ವತವಲ್ಲ. ಔಷಧ ಪಡೆಯುತ್ತಾ ಮನೆಯಲ್ಲೇ ಕುಳಿತರೆ ಮುಂದೇನೂ ಮಾಡಲು ಸಾಧ್ಯವಿಲ್ಲ. ಈ ಕಾಯಿಲೆ ನನ್ನನ್ನು ಇನ್ನಿಲ್ಲದಂತೆ ಬಾಧಿಸುತ್ತದೆ ಎಂದು ನಿರ್ಧರಿಸಿ ಮುಂದಡಿಯಿಟ್ಟೆ.
ಅಲ್ಲಿಂದ ನಾನು ತಿರುಗಿ ನೋಡಿದ್ದೇ ಇಲ್ಲ. ಕಾಯಿಲೆಯೊಂದಿಗೆ ನನ್ನ ಹೋರಾಟ ನಿರಂತರವಾಗಿತ್ತು. ನಿಧಾನವಾಗಿ ಔಷಧ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ ಯೋಗಾಸನ ಮಾಡಲು ಪ್ರಾರಂಭಿಸಿದೆ. ನಂತರ ದಿನಕ್ಕೆ ಒಂದಷ್ಟು ಸಮಯ ಧ್ಯಾನ, ಪ್ರಾಣಾಯಾಮ ಮಾಡುತ್ತಿದ್ದೆ. ಇದರಿಂದ ಕ್ರಮೇಣ ಆರೋಗ್ಯ ಸುಧಾರಿಸುತ್ತಾ ಹೋಯಿತು. ಕೊನೆಗೆ ಉಸಿರಾಟವನ್ನು ತಹಬದಿಗೆ ತರಲು ಈಜು ಕಲಿತೆ. ಇದು ನನಗೆ ಉಸಿರುಗಟ್ಟಿಸುವುದನ್ನು ಕಡಿಮೆ ಮಾಡಿತು. ಹೀಗೆ ಒಂದೊಂದೇ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುತ್ತಾ ಹೋದಂತೆ ನನ್ನ ಶ್ವಾಸಕೋಶದ ಮೇಲಿನ ಅಸ್ತಮಾ ಹಿಡಿತ ಕಡಿಮೆಯಾಯಿತು.
ದೇವ್ ಆನಂದ್ ಅವರ ಹಮ್ ದೋನೋ ಚಿತ್ರದ ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ ಹಾಡು ನನ್ನ ಜೀವನದ ಉದ್ದೇಶವನ್ನು ತಿಳಿಸುತ್ತದೆ. ಎಲ್ಲವೂ ನಮ್ಮ ಮನಸಿನ ಮೇಲೆ ನಿಂತಿದೆ. ನನ್ನ ಸಣ್ಣ ಜೀವನಶೈಲಿಯ ಬದಲಾವಣೆಯಿಂದ ಮತ್ತು ಬದ್ಧತೆಯಿಂದ ಆಸ್ತಮಾವನ್ನು ಸೋಲಿಸಲು ಸಾಧ್ಯವಾಗಿದೆ.
| ಅನುಪಮಾ ಡಿಡ್ಡಿ ಖಾಸಗಿ ಕಂಪನಿಯ ತರಬೇತಿ ಮುಖ್ಯಸ್ಥೆ
50ನೇ ವಯಸ್ಸಿನಲ್ಲಿ ಸಾಧನೆ: ಯಾವುದೂ ನಾವಂದುಕೊಂಡಂತೆ ಆಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕೇಬೇಕು. ನಾನು ಇದನ್ನೇ ಅನುಸರಿಸಿದೆ. ಸತತವಾದ ಪರಿಶ್ರಮವೇ ಸಾಧನೆಗೆ ಹಾದಿಯಾಯಿತು. 2015ರಲ್ಲಿ ನಾನು ಮೊದಲ ಹಾಫ್-ಮ್ಯಾರಥಾನ್ ಓಡಿದೆ. ನನ್ನ ಸಾಧನೆ ಇತರರಿಗೂ ಸ್ಪೂರ್ತಿ ಆಗಬೇಕು ಎಂದುಕೊಂಡು 50ನೇ ವರ್ಷದ ಹುಟ್ಟುಹಬ್ಬಕ್ಕೆ ಪರ್ವತಾರೋಹಣ ಮಾಡಲು ನಿರ್ಧರಿಸಿದೆ. ಇದಕ್ಕೆ ತಾಲೀಮು ನಡೆಸಲು ಅನುಭವಿ ಚಾರಣಿಗರ ಗುಂಪು ಸೇರಿಕೊಂಡೆ. ಅವರು ಹಿಮಾಲಯ ಏರುವ ಮೊದಲು ನನಗೆ ತರಬೇತಿ ನೀಡಿದರು. ನಂತರ ಸ್ಕೂಬಾ ಡೈವಿಂಗ್ ಕೋರ್ಸ್ಗೆ ನೋಂದಾಯಿಸಿಕೊಂಡೆ. ಫೆಬ್ರವರಿ 27ರಂದು, ನನ್ನ 50ನೇ ಹುಟ್ಟುಹಬ್ಬಕ್ಕಾಗಿ ಈಛಿಛಿಟ - ಖಛಿಚ ಛಜಿಡಜ್ಞಿಜ ಪ್ರಮಾಣಪತ್ರಕ್ಕಾಗಿ ಅಂಡಮಾನ್ಗೆ ಹೊರಟೆ. ಒಂದು ತಿಂಗಳ ನಂತರ, ಮಾರ್ಚ್ 27 ರಂದು, ಹಿಮಾಲಯದ ಶಿಖರಗಳಲ್ಲಿ ಒಂದಾದ ಸಂದಕ್ಪು (3636 ಮೀಟರ್) ಏರಿದೆ.
ಇದೆಲ್ಲವೂ ನನ್ನ ಜೀವನದ ಅನುಭವಗಳು. ಪ್ರಾರಂಭದಲ್ಲೇ ಆಗುವುದಿಲ್ಲ ಎಂದು ಕುಳಿತಿದ್ದರೆ ಅಸ್ತಮಾ ನನ್ನನ್ನು ಸಂಪೂರ್ಣ ಆವರಿಸಿಕೊಳ್ಳುತ್ತಿತ್ತು. ಆದರೆ ಅದಕ್ಕೆ ನಾನು ಅವಕಾಶ ಮಾಡಿಕೊಡದೆ ಮುನ್ನಡೆದೆ. ಈಗಲೂ ಚಾರಣಕ್ಕೆ ಹೋಗುತ್ತೇನೆ. ಜನರೊಂದಿಗೆ ಬೆರೆಯುತ್ತೇನೆ. ಅಸ್ತಮಾ ನನ್ನಿಂದ ದೂರಾಗಿದೆ. ಆದರೂ ದಿನನಿತ್ಯ ಯೋಗಾಭ್ಯಾಸ ಮುಂದುವರಿಸಿದ್ದೇನೆ.