ವಿವಾದಕ್ಕೆ ಕಾರಣವಾಯ್ತು ಸೊಳ್ಳೆ ಸಾಯಿಸುವ ಬ್ಯಾಟ್​!; ಐಎಎಸ್​ ಅಧಿಕಾರಿ ವಿರುದ್ಧ ಕ್ರಿಕೆಟಿಗನ ಅಸಮಾಧಾನ

Mosquito
Published on

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಒಂದು ಸ್ಟೇಟಸ್ ಹಾಕುವ ಮುನ್ನ ತುಂಬಾ ಯೋಚಿಸಬೇಕಾಗುತ್ತದೆ. ಏಕೆಂದರೆ ತಮಾಷೆಗೆಂದು ಹಾಕಿದ ಒಂದು ಸಣ್ಣ ಸ್ಟೇಟಸ್​ ಕೂಡ ವಿವಾದಕ್ಕೀಡಾಗಿ ಗಂಭೀರ ಎನಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಅಂಥದ್ದೇ ಒಂದು ಪ್ರಕರಣ ಇದೀಗ ಉಂಟಾಗಿದ್ದು, ಪರಿಣಾಮವಾಗಿ ಐಎಎಸ್​ ಅಧಿಕಾರಿಯೊಬ್ಬರ ವಿರುದ್ಧ ಕ್ರಿಕೆಟಿಗರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸುವಂತಾಗಿದೆ. ಸೋಮೇಶ್​ ಉಪಾಧ್ಯಾಯ ಎಂಬ ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಸ್ಟೇಟಸ್​ಗೆ ಕ್ರಿಕೆಟಿಗ ಅಮಿತ್​ ಮಿಶ್ರಾ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತೀಯರು ಬ್ಯಾಡ್ಮಿಂಟನ್​ನಲ್ಲಿ ಅದು ಹೇಗೆ ತಮಗಿಂತ ಉತ್ತಮವಾಗಿದ್ದಾರೆ ಎಂದು ಇಂಡೋನೇಷ್ಯಾದವರು ಅಚ್ಚರಿಪಡುತ್ತಿದ್ದಾರೆ ಎಂಬ ಕ್ಯಾಪ್ಷನ್​ನೊಂದಿಗೆ ಸೊಳ್ಳೆ ಸಾಯಿಸುವಂಥ ಬ್ಯಾಟ್​ ಚಿತ್ರವೊಂದನ್ನು ಟ್ವೀಟ್​ ಮಾಡಿದ್ದರು.

ಅದನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟಿಗ ಅಮಿತ್ ಮಿಶ್ರಾ, ಇದು ಅಭಿರುಚಿಹೀನ ಮಾತ್ರವಲ್ಲ, ನಮ್ಮ ಬ್ಯಾಡ್ಮಿಂಟನ್​ ಹೀರೋಗಳ ಸಾಧನೆಯನ್ನು ಅವಹೇಳನ ಮಾಡುವಂಥದ್ದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ಟ್ವೀಟ್​ಗಳು ಭಾರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು, ತಮಾಷೆ ಎಂಬುದು ಗಂಭೀರವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net