ಮಂಡ್ಯ ಹುಡುಗ್ರ ಅಭಿಮಾನ ನೋಡಿ 'ಓ ಮೈ ಗಾಡ್' ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!

Sunny
Published on

ಮಂಡ್ಯ: ಕರ್ನಾಟಕದ ಮಂಡ್ಯದ ಒಂದಷ್ಟು ಹುಡುಗರು ತಮ್ಮ ಊರಿಂದಲೇ ನಟಿ ಸನ್ನಿ ಲಿಯೋನ್ ಅವರ ಮನಸ್ಸನ್ನು ಗೆದ್ದಿದ್ದಾರೆ. ಮಾತ್ರವಲ್ಲ, ಅವರಿಂದ 'ಓ ಮೈ ಗಾಡ್' ಎಂಬ ಉದ್ಗಾರ ಬರುವಂಥ ಕೆಲಸವನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

ಮೇ 13ರಂದು ಮಂಡ್ಯದ ಕೊಮ್ಮೇರಹಳ್ಳಿಯಲ್ಲಿರುವ ಒಂದಷ್ಟು ಮಂದಿ ಸೇರಿ ನಟಿ ಸನ್ನಿ ಲಿಯೋನ್ ಜನ್ಮದಿನವನ್ನು ಆಚರಿಸಿದ್ದರು. ಗ್ರಾಮದ ಹೆಬ್ಬಾಗಿಲಲ್ಲಿ 20 ಅಡಿಗೂ ಉದ್ದದ ಸನ್ನಿ ಲಿಯೋನ್​ ಫ್ಲೆಕ್ಸ್ ಅಳವಡಿಸಿ, ಬಡಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬಣ್ಣಿಸಿದ್ದರು. ಮಾತ್ರವಲ್ಲ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ರಕ್ತದಾನ ಶಿಬಿರ ನಡೆಸಿ ಬಾಡೂಟ ಕೂಡ ಹಾಕಿಸಿದ್ದರು.

ಈ ಕುರಿತ ಮಾಹಿತಿ ಮಾಧ್ಯಮಗಳಿಂದಾಗಿ ಸನ್ನಿ ಲಿಯೋನ್​ ಗಮನ ಸೆಳೆದಿದ್ದು, ಮಂಡ್ಯ ಹುಡುಗರ ಅಭಿಮಾನಕ್ಕೆ ಆಕೆ ಮನಸೋತಿದ್ದಾರೆ. ಓ ಮೈ ಗಾಡ್.. ಇದನ್ನು ನಂಬಲಿಕ್ಕೇ ಸಾಧ್ಯವಿಲ್ಲ. ನಿಮ್ಮೆಲ್ಲರನ್ನು ಗೌರವಿಸುತ್ತೇನೆ, ನಿಮ್ಮಂತೆ ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ಥ್ಯಾಂಕ್ಯೂ ಸೋ ಮಚ್​.. ನಾನು ವಿಶೇಷವಾಗಿ ಫೀಲ್ ಆಗುವಂತೆ ನೀವೆಲ್ಲ ಮಾಡಿದ್ದೀರಿ. ಲವ್ ಯೂ.. ಎಂಬುದಾಗಿ ಸನ್ನಿ ಲಿಯೋನ್ ಪತ್ರಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net