ಪತಿ ಸಾವಿನ ಸುದ್ದಿ ತಿಳಿದು ಪಾರ್ಟಿ ಆಯೋಜಿಸಿದ ಪತ್ನಿ; ಇದರ ಹಿಂದಿದೆ ಒಂದು ಬಲವಾದ ಕಾರಣ

Party
Published on

ನವದೆಹಲಿ: ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡಾಗ ಅವರ ನೆನಪಿನಲ್ಲಿ ವರ್ಷಾನುಗಟ್ಟಲೇ ಕಾಲ ಕಳೆಯುವುದನ್ನು ನಾವು ನೋಡಿದ್ದೇವೆ. ಕೆಲವರು ಆಘಾತಕ್ಕೊಳಗಾಗಿ ಮೃತಪಟ್ಟಿರುವ ಸುದ್ದಿಯನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಮಹಿಳೆ ಪತಿ ಸಾವಿನ ಸುದ್ದಿ ಕೇಳಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿರುವ ಘಟನೆ ಅಮೆರಿಕದ ಅರಿಜೋನಾದಲ್ಲಿ ನಡೆದಿದೆ. 

ಪಾರ್ಟಿಯಲ್ಲಿ ಸುಮಾರು 500ಕ್ಕೂ ಹೆಚ್ಚಿ ಅತಿಥಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಮಹಿಳೆಯ ನಡೆಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದರು ಎಂದು ಕೇಳಿದರೆ ನೀವು ಹುಬ್ಬೇರುವಂತೆ ಮಾಡುತ್ತದೆ.

Funeral

ಕೇಟಿ ಯಂಗ್​ ಎಂಬ ಮಹಿಳೆಯ ಪತಿ ಬ್ರೈನ್​ಸ್ಟ್ರೋಕ್​ನಿಂದಾಗಿ 39 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದು, ಪತಿಯ ಸಾವಿನ ಸುದ್ದಿ ತಿಳಿದು ಮಕ್ಕಳು ಆಘಾತಕ್ಕೊಳಗಾಗಬಾರದೆಂಬ ಕಾರಣಕ್ಕೆ ಮಹಿಳೆ ದುಃಖದ ನಡುವೆಯೂ ತಮ್ಮ ಮನೆಯಲ್ಲಿ ಅದ್ಧೂರಿ ಪಾರ್ಟಿ ಆಯೋಜನೆ ಮಾಡಿದ್ದಾರೆ. ಈ ಸುದ್ದಿ ಕೇಳಿ ಹಲವರಿಗೆ ಶಾಕ್​ ಆಗಿದ್ದು, ಮಹಿಳೆಯ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಮಹಿಳೆಯ ನಡೆಯನ್ನು ಆಕ್ಷೇಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೇಟಿ ಯಂಗ್​, ಮಕ್ಕಳು ತಮ್ಮ ತಂದೆಯೊಂದಿಗೆ ಕಳೆದ ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಹಾಗಾಗಿ ದುಃಖದ ಬದಲು, ನಾನು ನನ್ನ ಪತಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳುವುದಕ್ಕೆ ಪಾರ್ಟಿಯನ್ನು ಆಯೋಜಿಸಿದೆ. ಮಕ್ಕಳು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಅಳದೆ ನಗು ನಗುತ್ತಾ ಭಾಗಿಯಾಗಿದ್ದರು. ತಂದೆಯ ಸಾವಿನ ಸುದ್ದಿಯ ಆಘಾತಕ್ಕಿಂತ ಖುಷಿಯಾಗಿ ಕಳಿಸಿಕೊಟ್ಟಿದ್ದು, ಅವರ ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಎಂದು ಕೇಟಿ ಯಂಗ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net