

ನ್ಯೂಯಾರ್ಕ್: ಕ್ರಿಕೆಟ್ ಶಿಶು ಯುಎಸ್ಎ ವಿರುದ್ಧದ ಸೋಲಿನ ಬಳಿಕ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಇಂದು ಟೀಮ್ ಇಂಡಿಯಾದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಇನ್ನೂ ಪಂದ್ಯ ಶುರುವಾಗುದವುದಕ್ಕೂ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ನೂತನ ಕೋಚ್ ಗ್ಯಾರಿ ಕರ್ಸ್ಟನ್ ಆಟಗಾರರನ್ನು ಪ್ರೇರೆಪಿಸುವ ಅವಶ್ಯಕತೆಯಿಲ್ಲ ಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರ ಹೇಳಿಕೆಯೂ ಪಾಕಿಸ್ತಾನದ ಕಳಪೆ ಪ್ರದರ್ಶನ ಆಧರಿಸಿ ನೀಡಲಾಗಿದೆ ಎಂದು ವರದಿಯಾಗಿದೆ.
ನನ್ನ ಪ್ರಕಾರ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನು ಸಾಕಷ್ಟು ಅನುಭವ ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮೊದಲಿಗೆ ನಾವು ಆಟವನ್ನು ಸರಿಯಾದ ರೀತಿಯಲ್ಲಿ ಆಡಬೇಕಿದೆ. ನಾವು ಎಲ್ಲವನ್ನೂ ಕಾಂಪ್ಲಿಕೇಟ್ ಮಾಡಲು ಬಯಸುವುದಿಲ್ಲ. ಪಂದ್ಯ ಎಂದಮೇಲೆ ಸೋಲು-ಗೆಲುವು ಕಾಮನ್ ನಾವು ಅದರ ಬಗ್ಗೆ ಹೆಚ್ಚಿನದ್ದು ಚಿಂತಿಸಬೇಕಿಲ್ಲ.
ನಾನು ಇತಿಹಾಸವನ್ನು ಹೆಚ್ಚು ಕೆದಕಲು ಹೋಗುವುದಿಲ್ಲ. ನಾವು ಉತ್ತಮ ಆಟವಾಡಬೇಕೆಂದು ಬಯಸುತ್ತೇವೆ. ಸಾಧ್ಯವಾದಷ್ಟು ನಾವು ಎದುರಾಳಿ ತಂಡದ ಆಟಗಾರರ ಮೇಲೆ ಸಾಕಷ್ಟು ಒತ್ತಡ ಹೇರಲು ಯತ್ನಿಸುತ್ತೇವೆ. ಇದು ದೊಡ್ಡ ಆಟವಾಗಿದ್ದು, ಆಟಗಾರರಿಗೆ ಪ್ರೇರೆಪಿಸುವ ಅವಶ್ಯಕತೆಯಿಲ್ಲ. ಅತ್ಯುತ್ತಮವಾಗಿ ಆಟವಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.