ಪತಿ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು: ಮಕ್ಕಳಿಬ್ಬರ ಸಹಿತ ವಿಡಿಯೋ ಮಾಡಿ ಸಹಾಯ ಕೇಳಿದ ಪತ್ನಿ

Pooja gandhi F (1)
Published on

ಬೆಂಗಳೂರು: ಪತಿ ನನ್ನನ್ನು ಮನೆಯಿಂದ ಹೊರಹಾಕಿದ್ದು, ನನಗೆ ಜೀವ ಬೆದರಿಕೆ ಇದೆ. ಆತ ನಮ್ಮನ್ನು ಯಾವುದೇ ಕ್ಷಣದಲ್ಲೂ ಕೊಲ್ಲಬಹುದು ಎಂದು ಮಹಿಳೆಯೊಬ್ಬರು ಇಬ್ಬರು ಮಕ್ಕಳ ಸಹಿತ ವಿಡಿಯೋ ಮಾಡಿ ಸಹಾಯಕ್ಕಾಗಿ ಕೋರಿಕೊಂಡ ಪ್ರಕರಣ ನಡೆದಿದೆ.

ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೂಜಾ ಗಾಂಧಿ ಎಂಬ ಮಹಿಳೆ ಈ ವಿಡಿಯೋ ಮಾಡಿಕೊಂಡಿದ್ದು, ಈಕೆಯ ಸಹೋದರ ರಾಹುಲ್ ಗಾಂಧಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ನನ್ನ ಪತಿಯ ಹೆಸರು ವೈಭವ್ ಕುಮಾರ್ ಜೈನ್, ಆತ ನಮ್ಮನ್ನು ಮನೆಯಿಂದ ಹೊರಹಾಕಿದ್ದು, ನಮಗೆ ಜೀವ ಬೆದರಿಕೆ ಇದೆ. ನಾನು ಇಬ್ಬರು ಮಕ್ಕಳ ಜತೆ ಲಾಬಿಯಲ್ಲಿ ಕುಳಿತುಕೊಂಡಿದ್ದೇನೆ. ಆತ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು. ಪತಿ ಅಕ್ರಮ ದಾಖಲೆ ಸೃಷ್ಟಿಸುತ್ತಿದ್ದು, ಆತ ಮಾತ್ರವಲ್ಲದೆ ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಎಂಬವರಿಂದಲೂ ನನ್ನ ಜೀವಕ್ಕೆ ಅಪಾಯವಿದೆ ಎಂದು ಈ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net