

ನವದೆಹಲಿ: ಪ್ರೀತಿ ಎಂದರೆ ಸುಂದರವಾದ ಬಂಧವಾಗಿದೆ. ಆದರೆ ಸಂಬಂಧ ಹಾಳಾದರೆ ಆ ಒಂದು ಬಂಧಕ್ಕೆ ಅರ್ಥವೇ ಇರುವುದಿಲ್ಲ. ಇಬ್ಬರ ಮನಸ್ಸು ಪರಸ್ಪರ ದೂರವಾಗುತ್ತದೆ. ಹೀಗೆ ಇಲ್ಲೊಬ್ಬಳು ಯುವತಿ ದೂರವಾದ ಪ್ರೀಯಕರನಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಕಸದ ಚೀಲಗಳನ್ನು ಕಳುಹಿಸುವ ಮೂಲಕ ತನ್ನ ಮಾಜಿ ಗೆಳೆಯನನ್ನು ಕೆಣಕಿದ್ದಾರೆ.ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವತಿ ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ತೋರಿಸುತ್ತದೆ. “ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ನಿಮಗೆ ಒಂದು ಉಡುಗೊರೆ ಕಳುಹಿಸಲಾಗಿದೆ, ಅದನ್ನು ಪ್ರೀತಿಯಿಂದ ಧರಿಸು. ಅದು ಸರಿಹೋಗದಿದ್ದರೆ ನನಗೆ ತಿಳಿಸು, ನಾನು ದೊಡ್ಡದನ್ನು ಕಳುಹಿಸುತ್ತೇನೆ ಎಂದು ಮೇಸೆಜ್ ಮಾಡಲಾಗಿದೆ. ಜತೆಗೆ 'ಕಸದ ಚೀಲಗಳು' ಫೋಟೋವು ಕಾಣಿಸುತ್ತದೆ.
"ನನ್ನ ರೂಮ್‌ಮೇಟ್‌ನ ಮಾಜಿ ಪ್ರೇಯಸಿ ಇದನ್ನು ಅವನಿಗೆ ಕಳುಹಿಸಿದ್ದಾಳೆ.ನನಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ" ಎಂದು ಆತನ ಸ್ನೇಹಿತ ಫೋಟೋವನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆ ಗೈದಿದ್ದಾರೆ.
ಬ್ಯಾಂಡೇಜ್ ನೀಡಲು ಬಯಸಿದ್ದರು, ಆದರೆ ಗಾಯಾ ತುಂಬಾ ದೊಡ್ಡದಾಗಿ ಅನ್ನಿಸುತ್ತದೆ ಹೀಗಾಗಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೂಡಾ ಕಾಮೆಂಟ್ ಮಾಡಿದೆ.