More

    VIDEO| ಮೆಟ್ರೋದಲ್ಲಿ ಫಿಟ್ನೆಸ್ ಕೋಚ್ ಸ್ಟಂಟ್; ನೆಟ್ಟಿಗರಿಂದ ಟೀಕೆ

    ನವದೆಹಲಿ: ಮೆಟ್ರೋದಲ್ಲಿ ರೀಲ್ಸ್​​ ಮತ್ತು ನೃತ್ಯಗಳು ಸಾಮಾನ್ಯವಾಗಿದೆ. ಮೆಟ್ರೋ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಹಲವು ಯುವಕರು ವಿಡಿಯೋ ಮಾಡುತ್ತಿದ್ದಾರೆ. ಫಿಟ್ನೆಸ್ ಕೋಚ್ ಮಾಡಿರುವ ಸ್ಟಂಟ್ಸ್ ಮಾಡಿರುವ ಹಳೆ ವಿಡಿಯೋ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆ ಯಾವ ದೇಶಗಳಿಗೆ ಪ್ರಯಾಣಿಸಬಹುದು ಗೊತ್ತಾ? 

    ಮೆಟ್ರೋ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳು ಪ್ರಯಾಣಿಕರ ಕಿವಿಗೆ ಬೀಳುತ್ತಿಲ್ಲ. ದೆಹಲಿ ಮೆಟ್ರೋದಲ್ಲಿ ಇದು ಪ್ರತಿದಿನ ಸುದ್ದಿಯಲ್ಲಿದೆ.
    ಇತ್ತೀಚೆಗೆ, ಫಿಟ್ನೆಸ್ ತರಬೇತುದಾರ ಜಗಜೋತ್ ಕೌರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಮೆಟ್ರೋ ಹ್ಯಾಂಡಲ್ಸ್ ಬಳಸಿ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: “ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ

    ಸಾರ್ವಜನಿಕವಾಗಿ ಕ್ಯಾಲಿಸ್ಟೆನಿಕ್ಸ್ ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ಇದಕ್ಕೆ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಾಹಸಗಳು ಅದ್ಭುತ.. ​​ಆದರೆ ಮೆಟ್ರೋದಲ್ಲಿ ಇವುಗಳನ್ನು ತೋರಿಸುವುದು ಸರಿ ಇಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    View this post on Instagram

    A post shared by Jagjot Kaur (@jagjot_k143)

    ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಮೆಟ್ರೋ ಆವರಣದೊಳಗೆ ವಿಡಿಯೋಗಳನ್ನು ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆಗಳನ್ನು ನೀಡಿದೆ. ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರಯಾಣಿಸಿ ಎಂದು ವಿನಂತಿಸಿದರು. ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸಿ ಕೆಲವರು ಈ ರೀತಿ ವಿಡಿಯೋ ಮಾಡುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬೆಂಗಳೂರಲ್ಲಿ ತಪ್ಪಿದ ಭಾರಿ ದುರಂತ; ಶಂಕಿತ ಉಗ್ರರ ಬಂಧನದ ಹಿಂದಿದೆ ರೋಚಕ ಸ್ಟೋರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts