More

    ಫ್ರೆಂಡ್​ ಮನೆಯಲ್ಲೇ ಯುವತಿ ಎಗರಿಸಿದ ಹಣದ ಮೊತ್ತ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ…!

    ನವದೆಹಲಿ: ಫ್ರೆಂಡ್​​ ಮನೆಯಲ್ಲೇ ಎರಡು ಕಂತುಗಳಲ್ಲಿ 57 ಲಕ್ಷ ರೂ. ಕಳ್ಳತನ ಮಾಡಿದ ಆರೋಪದಲ್ಲಿ 37 ವರ್ಷದ ಮಹಿಳೆಯನ್ನು ಕೇಂದ್ರ ದೆಹಲಿಯ ಹೌಜ್​ ಕಾಜಿ ಏರಿಯಾದಲ್ಲಿ ಬಂಧಿಸಿರುವುದಾಗಿ ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

    ದೋಚಿದ ಹಣವನ್ನು ಇಬ್ಬರು ಸಹೋದರರೊಂದಿಗೆ ಮಹಿಳೆ ಹಂಚಿಕೊಂಡಿದ್ದು, ಅವರನ್ನೂ ಸಹ ಬಂಧಿಸಲಾಗಿದೆ. ಮಹಿಳಾ ಆರೋಪಿಯನ್ನು ಪ್ರತಾಪ್​ ನಗರ ನಿವಾಸಿ ಪೂಜಾ ಎಂದು ಗುರುತಿಸಲಾಗಿದೆ. ಆಕೆಯ ಸಹೋದರರಾದ ವರುಣ್ (29) ಮತ್ತು ಅಮಿತ್​ ದಬರ್​ (40) ಸೀತಾರಾಮ್​ ಬಜಾರ್​ ನಿವಾಸಿಗಳಾಗಿದ್ದಾರೆ.

    ಇದನ್ನೂ ಓದಿ: ಬದಲಾಗಲಿದೆ ಕ್ರಿಕೆಟ್!: ಕರೊನಾ ವೈರಸ್​ಭೀತಿಯಿಂದಾಗಿ ಹೊಸ ಹೊಸ ನಿಯಮಗಳು

    ಕೇಂದ್ರ ದೆಹಲಿಯ ಸೀತಾರಾಮ್​ ಬಜಾರ್​ ನಿವಾಸಿ 65 ವರ್ಷದ ಪುಷ್ಪ ಅವರು ಹೌಜ್​ ಕಾಜಿ ಪೊಲೀಸ್​ ಠಾಣೆಯಲ್ಲಿ ಜೂನ್​ 29ರಂದು ದೂರು ನೀಡಿದ್ದರು. 2015ರಲ್ಲಿ ಜಂಟಿ ಮಾಲೀಕತ್ವದಲ್ಲಿ ನಾನು ಮತ್ತು ನನ್ನ ಸಂಬಂಧಿ ಒಂದು ಜಮೀನನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಿದ್ದೆವು. ಅದರಲ್ಲಿ ಬಂದ ನನ್ನ 80 ಲಕ್ಷ ರೂ. ಪಾಲನ್ನು ಮನೆಯ ಕಂಟೈನರ್​ನಲ್ಲಿ ಇಟ್ಟಿದೆ. ಹಣ ಹೇಗೆ ಕಳುವಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ, ಮಗಳ ಫ್ರೆಂಡ್ಸ್​ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಪೂಜಾಳನ್ನು ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಆಗಾಗ ಅವರ ಮನೆಗೆ ಭೇಟಿ ನೀಡಿ ಮನೆ ಸಂಬಂಧ ಕೆಲ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದೆ. ಕಂಟೈನರ್​ನಲ್ಲಿ ಇಡಲಾಗಿದ್ದ ಹಣವನ್ನು ಕೆಲವು ವರ್ಷಗಳ ಹಿಂದೆ ಗಮನಿಸಿದ್ದೆ. ಅದರಲ್ಲಿ ಮೊದಲ ಭಾಗವಾಗಿ 2017ರಲ್ಲಿ 27 ಲಕ್ಷ ರೂ. ಕದ್ದು ಅದರಲ್ಲಿ 22 ಲಕ್ಷ ರೂ. ಅನ್ನು ಮನೆ ಕೊಳ್ಳಲು ನನ್ನ ಸಹೋದರರಿಗೆ ನೀಡಿದ್ದೆ ಎಂದು ಬಹಿರಂಗಪಡಿಸಿದ್ದಾಳೆ.

    ಇದನ್ನೂ ಓದಿ: ಗುಡ್​ಬೈ ಬೆಂಗಳೂರು: ಕರೊನಾಗೆ ಹೆದರಿ ಪಾತ್ರೆಪಗಡೆ ಸಮೇತ ಊರು ಬಿಟ್ಟ ಜನ

    ಇಷ್ಟಕ್ಕೆ ಸುಮ್ಮನಾಗದ ಪೂಜಾ, ಜೂನ್​ 8ರಂದು ಮತ್ತೆ ಪುಷ್ಪ ಮನೆಗೆ ಮತ್ತೆ 30 ಲಕ್ಷ ರೂ. ಅನ್ನು ಕದ್ದಿದ್ದಾಳೆ. ಮೂವರು ಆರೋಪಿಗಳಿಂದ ಸದ್ಯ 29.43 ಲಕ್ಷ ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ. 22 ಲಕ್ಷ ರೂ. ಮೌಲ್ಯದ ಫ್ಲ್ಯಾಟ್​ ಮತ್ತು 3 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)

    ಆತ್ಮನಿರ್ಭರ ಭಾರತ ಆಪ್ ಚಾಲೆಂಜ್: ಹೊಸ ಯೋಜನೆಗೆ ಪ್ರಧಾನಿ ಮೋದಿ ಚಾಲನೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts