More

    ಗಂಡನ ಫೋನಲ್ಲಿ ತನ್ನದೇ ಫೋಟೋ ಕಂಡು ಗಂಡನ ಕೊಲೆ ಮಾಡಲು ಹೊರಟ ಹೆಂಡತಿ!

    ಮೆಕ್ಸಿಕೋ: ಮನುಷ್ಯ ಇದ್ದಂತೇ ಇರುವುದಿಲ್ಲ. ದೈಹಿಕವಾಗಿ ಪ್ರತಿ ವ್ಯಕ್ತಿಯೂ ಬದಲಾಗುತ್ತಲೇ ಇರುತ್ತಾನೆ. ಅದೇ ರೀತಿಯಾದ ದೈಹಿಕ ಬದಲಾವಣೆಯಿಂದಾಗಿ ಹೆಂಡತಿಯೊಬ್ಬಳು ಗಂಡನನ್ನೇ ಕೊಲೆ ಮಾಡಲು ಹೊರಟ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

    ಇದನ್ನೂ ಓದಿ: ‘ಕೃಷಿ ಕಾಯ್ದೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ’ ಐಎಂಎಫ್​ ಅಭಿಮತ

    ಅದು ಸುಖ ಸಂಸಾರವಾಗಿತ್ತು. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಅದೊಂದು ದಿನ ಹೆಂಡತಿ ಗಂಡನ ಫೋನ್​ ನೋಡುವಾಗ ಗಂಡ ಯಾರೋ ಬೇರೆ ಹುಡುಗಿಯೊಂದಿಗಿರುವ ಪೋಟೋ ನೋಡಿದ್ದಾಳೆ. ಇದರಿಂದ ಸಿಟ್ಟಾದ ಹೆಂಡತಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಗಂಡನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ನನ್ನ ಬಿಟ್ಟು ಬೇರೆ ಹುಡುಗಿಯ ಜತೆ ತಿರುಗಾಡುವ ನೀನು ಬದುಕಬೇಡ ಎಂದು ರೇಗಾಡಿದ್ದಾಳೆ.

    ಹೆಂಡತಿಯ ಚಾಕು ದಾಳಿಯಿಂದ ತಪ್ಪಿಸಿಕೊಂಡ ಗಂಡ, ಸಾಕಷ್ಟು ಕಷ್ಟ ಪಟ್ಟು ಆಕೆಯನ್ನು ಸಮಾಧಾನ ಮಾಡಿದ್ದಾನೆ. ಆಮೇಲೆ ತನ್ನ ಮೊಬೈಲ್​ ತೆಗೆದು ಫೋಟೋಗಳನ್ನು ಸರಿಯಾಗಿ ತೋರಿಸಲಾರಂಭಿಸಿದ್ದಾನೆ. ಸರಿಯಾಗಿ ನೆನಪಿಸಿಕೋ, ಇದು ನಾನು ನೀನು ಪ್ರೀತಿ ಮಾಡುವ ಸಮಯದಲ್ಲಿ ತೆಗೆಸಿಕೊಂಡ ಫೋಟೋಗಳು ಎಂದು ನೆನಪಿಸಿದ್ದಾನೆ. ಆಗ ಹೆಂಡತಿ ಫೋಟೋದಲ್ಲಿರುವುದು ತಾನೆ ಎಂದು ಅರಿತು ಶಾಕ್​ ಆಗಿದ್ದಾಳೆ.

    ಇದನ್ನೂ ಓದಿ: ‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

    ಮದುವೆಗೆ ಮುಂಚೆ ಆಕೆ ಸಾಕಷ್ಟು ತೆಳ್ಳಗಿದ್ದಳಂತೆ. ಆದರೆ ಮದುವೆಯಾದ ಮೇಲೆ ವಿಪರೀತ ದಪ್ಪ ಆದ ಕಾರಣ ಆಕೆಗೆ ತನ್ನ ಹಳೆಯ ಫೋಟೋಗಳ ಗುರುತು ಸಿಕ್ಕಿಲ್ಲ. ಅದೂ ಅಲ್ಲದೆ ಹಳೆಯ ಫೋಟೋಗಳನ್ನು ಡಿಜಿಟಲ್​ ಟಚ್​ಅಪ್​ ಕೊಟ್ಟು ಎಡಿಟಿಂಗ್​ ಮಾಡಿದ್ದ ಗಂಡನಿಂದಾಗಿ ಈ ಎಡವಟ್ಟು ಸಂಭವಿಸಿದೆ. (ಏಜೆನ್ಸೀಸ್​)

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts