ಹೆತ್ತ ಮಗುವನ್ನೇ 800 ರೂ.ಗೆ ಮಾರಾಟ ಮಾಡಿದ ತಾಯಿ…

child foot
Published on

ಮಯೂರ್​ಭಂಜ್​: ಮಹಿಳೆಯೊಬ್ಬಳು ಹೆತ್ತ ಮಗುವನ್ನ ಕೇವಲ 800 ರೂ.ಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್​ಭಂಜ್​ ಬಳಿ ನಡೆದಿದೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​​ ಖಾತೆ ತೆರೆದ ನಟ ಪವನ್​ ಕಲ್ಯಾಣ್​; ಒಂದೇ ದಿನದಲ್ಲಿ ಅಧಿಕ ಫಾಲೋವರ್ಸ್!​​

ಮಹಿಳೆಯನ್ನು ಕರಾಮಿ ಮುರ್ಮ ಎಂದು ಗುರುತಿಸಲಾಗಿದ್ದು, ಬಡತನ ಹಾಗೂ ಎರಡನೇ ಮಗುವು ಕೂಡ ಹೆಣ್ಣು ಹುಟ್ಟಿದ ನಿರಾಶೆಯಿಂದಾಗಿ ಈ ಕೃತ್ಯವನ್ನು ಎಸಗಿದ್ದಾಳೆ. ಆಕೆ ಪತಿಯು ಎಂದಿನಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದಿದ್ದು, ಈ ವೇಳೆ ಮಗು ಕಾಣದೇ ಇದ್ದಾಗ ಘಟನೆಯು ಬೆಳಕಿಗೆ ಬಂದಿದೆ.
ಘಟನೆಯಿಂದ ತೀವ್ರವಾಗಿ ನೊಂದಿರುವ ಗಂಡ ಕೂಡಲೇ ಕುಂಟಾ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಕರಾಮಿ ಮುರ್ಮು, ಮಧ್ಯವರ್ತಿ ಕೆಲಸಕ್ಕಾಗಿ ಮಾಹಿ ಮುರ್ಮ ಹಾಗೂ ಮಗುವನ್ನು ಖರೀದಿಸಿದ ಆರೋಪದಲ್ಲಿ ಫುಲ್ಮಂಡಿ ಮರಂಡಿ ಹಾಗೂ ತುಡುಕುಡ್​ ಎಂಬ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net