More

    ಇನ್​​ಸ್ಟಾಗ್ರಾಮ್​​ ಖಾತೆ ತೆರೆದ ನಟ ಪವನ್​ ಕಲ್ಯಾಣ್​; ಒಂದೇ ದಿನದಲ್ಲಿ ಅಧಿಕ ಫಾಲೋವರ್ಸ್!​​

    ಆಂಧ್ರಪ್ರದೇಶ: ತಮ್ಮ ಅಭಿಮಾನಿಗಳಿಗೆ ಕೊಟ್ಟ ಮಾತಿನಂತೆ ಇದೀಗ ನೂತನವಾಗಿ ಇನ್​​ಸ್ಟಾಗ್ರಾಮ್ ಖಾತೆಯನ್ನು ಟಾಲಿವುಡ್​​​ನ ಪವರ್​ ಸ್ಟಾರ್ ನಟ ಪವನ್​ ಕಲ್ಯಾಣ್ ತೆರೆದಿದ್ದಾರೆ.

    ಇದನ್ನೂ ಓದಿ: ಚಲಿಸುತ್ತಿರುವ ಬಸ್​ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ; ಪ್ರಾಣಾಪಾಯದಿಂದ ಪಾರು

    ಇತ್ತೀಚೆಗಷ್ಟೇ ನಟ ಪವನ್ ಕಲ್ಯಾಣ್ ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದ್ದು, ಈ ಬಗ್ಗೆ ಅವರ ಅಭಿಮಾನಿಗಳು ಭಾರಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ತಮ್ಮ ಫ್ಯಾನ್ಸ್​​ಗೆ ಕೊಟ್ಟ ಮಾತಿನಂತೆ ನಟ ಈಗ ಸಾಮಾಜಿಕ ಜಾಲತಾಣದ ಮತ್ತೊಂದು ವೇದಿಕೆಗೆ ಕಾಲಿಟ್ಟಿದ್ದಾರೆ. ಸದ್ಯ ಹೊಸ ಖಾತೆಯಲ್ಲಿ ಯಾವುದೇ ಫೋಟೋ, ಸ್ಟೋರಿ, ರೀಲ್ಸ್​​ ಹಂಚಿಕೊಳ್ಳದ ಪವನ್ ಕಲ್ಯಾಣ್, ಟ್ವಿಟರ್‌ನಲ್ಲಿ ಬಳಸುವ ಪ್ರೊಫೈಲ್ ಫೋಟೋವನ್ನು ಇದಕ್ಕೆ ಹಾಕಿದ್ದಾರೆ.

    ಖಾತೆ ತೆರೆದ ಮೊದಲ ದಿನವೇ ಪವನ್ ಕಲ್ಯಾಣ್ ಅವರನ್ನು 1 ಲಕ್ಷದ ಮೂರು ಸಾವಿರ ಅನುಯಾಯಿಗಳು ಆಗಿದ್ದರು. ಆದ್ರೆ, ಇಂದು ಫಾಲೋವರ್ಸ್ ಸಂಖ್ಯೆ 9 ಲಕ್ಷದ 92,000ಕ್ಕೆ ಏರಿಕೆಯಾಗಿದೆ. ಇನ್‌ಸ್ಟಾಗ್ರಾಮ್​ನಲ್ಲಿ ತಮ್ಮ ಮುಂದಿನ ರಾಜಕೀಯ ನಿಲುವುಗಳು, ಚಲನಚಿತ್ರದ ಬಗ್ಗೆ ಹೊಸ ಮಾಹಿತಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts