

ಉತ್ತರಪ್ರದೇಶ: ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಅದನ್ನು ಅಲ್ಲೇ ಬಿಟ್ಟು ಹೋದ ಘಟನೆ ಉತ್ತರಪ್ರದೇಶದ ಜಲೌನ್ ಜಿಲ್ಲೆಯ ಓರೈ ರೈಲ್ವೆ ನಿಲ್ದಾಣದ ಮಹಿಳಾ ಟಾಯ್ಲೆಟ್ನಲ್ಲಿ ನಡೆದಿದೆ. ನವಜಾತ ಶಿಶು, ಗಂಡು ಮಗುವನ್ನು ಜಿಆರ್‌ಪಿ ಠಾಣಾ ವ್ಯಾಪ್ತಿಯ ಒರೈ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಸುರಕ್ಷಿತ ಹಾಗೂ ಆರೋಗ್ಯವಾಗಿದೆ.
ಈ ಘಟನೆ ನಡೆದಿದೆ ಎಂದು ಹೇಳಾಲಾಗುತ್ತಿದ್ದು ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (ಎನ್‌ಸಿಐಬಿ) ಪ್ರಧಾನ ಕಛೇರಿ ಟ್ವೀಟ್ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ.
ತಾಯಿಯಾಗಲು ಇಷ್ಟವಿರದ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಅನೇಕ ನಿದರ್ಶನಗಳಲ್ಲಿ, ಈ ತಾಯಂದಿರು ಮಗುವನ್ನು ಡಸ್ಟ್ಬಿನ್ಗಳು, ಇತರ ಸಾರ್ವಜನಿಕ ಸ್ಥಳಗಳ ಬಳಿ ಎಸೆಯುತ್ತಾರೆ. ಇದರಿಂದಾಗಿ ಚಿಕ್ಕ ಹಸುಳೆಗಳನ್ನು ಬೀದಿ ನಾಯಿಗಳು ತಿನ್ನುವ ಸಾಧ್ಯತೆ ಇರುತ್ತದೆ. ಮತ್ತು ನಾವು ಇಂತಹ ಘಟನೆಗಳನ್ನು ಹಿಂದೆ ನೋಡಿದ್ದೇವೆ ಕೂಡ.
ಈ ಪ್ರಕರಣದಲ್ಲಿ ಅದೃಷ್ಟವಶಾತ್ ಮಗು ಸರಿಯಾದ ಸಮಯಕ್ಕೆ ಜನರ ಗಮನಕ್ಕೆ ಬಂದಿದೆ. ಸಾರ್ವಜನಿಕರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಪ್ರಕರಣವನ್ನು ಒಂದು ಘಟ್ಟಕ್ಕೆ ತಲುಪಿಸಿದ್ದಾರೆ. ಗಂಡು ಮಗು ಆರೋಗ್ಯವಾಗಿದ್ದು, ಒರೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)