ಪಿ.ಜಿಯಲ್ಲಿ ಕೇರಳತಿ v/s ಕನ್ನಡತಿ; ಅಸಹಾಯಕತೆ ತೋಡಿಕೊಂಡ ಕರ್ನಾಟಕದ ವೈದ್ಯೆ..!

karnataka vs kerala feature
Published on

ಬೆಂಗಳೂರು: ಮಲಗಿದ್ದಾಗ ವಿಡಿಯೋ ಮಾಡಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕಳುಹಿಸಿದರೆ ಹೇಗೆ ಆಗಬಹುದು? ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಬಂದು ನಿದ್ದೆ ಮಾಡೋಣ ಎಂದು ತಲೆ ಒರಗಿಸಿದಾಗಬ ಪಕ್ಕದಲ್ಲಿದ್ದವರು ಜೋರಾಗಿ ಮಾತನಾಡಿದರೆ ಹೇಗಾಗಬಹುದು? ಇಂತಹದೇ ಪರಿಸ್ಥಿತಿಯನ್ನು ವೈದ್ಯೆಯೊಬ್ಬರು ಅನುಭವಿಸಿರುವ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪಿ.ಜಿಯ ವಾರ್ಡನ್​ಗೆ ಪತ್ರವನ್ನೂ ಬರೆದಿರುವ ಅವರು ಅಳುತ್ತಾ ದುಃಖವನ್ನು ವ್ಯಕ್ತಪಡಿಸಿದ ವಿಡಿಯೋ ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ. ಅವರು ಬರೆದಿರುವ ಪತ್ರದಲ್ಲಿ ಅವರ ರೂಂ ಮೇಟ್​ ತಡರಾತ್ರಿಯವರೆಗೆ ವಿಡಿಯೋ ಕಾಲ್​ನಲ್ಲಿ ಜೋರಾಗಿ ಮಾತನಾಡಿ ಪದೇ ಪದೇ ನಿದ್ದೆಗೆ ಭಂಗ ತರುತ್ತಿರುವ ಬಗ್ಗೆ ಆರೋಪಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಸೃಷ್ಟಿ, ಬೆಳಗ್ಗೆ 8ರಿಂದ ರಾತ್ರಿ 9.30ರ ವರೆಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುತ್ತಾರೆ. ನಂತರ ರೂಮಿಗೆ ಬಂದು ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ನಿದ್ದೆ ಹೋಗುತ್ತಾರೆ ಎಂದು ವೈದ್ಯರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೆಯೂ ಇವರು ಪಿ.ಜಿಯ ವಾರ್ಡನ್​ಗೆ ಮೌಖಿಕವಾಗಿ ದೂರು ನೀಡಿದ್ದರು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಷ್ಟಾದರೂ ಜನವರಿ 10ರ ಮುಂಜಾನೆ 2-3 ಗಂಟೆ ಹೊತ್ತಿಗೆ ವೈದ್ಯೆಯ ರೂಂ ಮೇಟ್​ ಆಗಿರುವ ಅಸೀಲಾ ಅಡಯೋಡಿ ವಿಡಿಯೋ ಕಾಲಿನಲ್ಲಿದ್ದ ಆ ಬದಿಯ ವ್ಯಕ್ತಿಗೆ ಅಸಭ್ಯವಾಗಿ ತೋರಿಸಿದ್ದಾಳೆ. ಇದನ್ನು ಪ್ರಶ್ನಿಸಿದಕ್ಕೆ ವೈದ್ಯೆ ದೃಷ್ಟಿಗೆ ಈ ರೂಂ ಮೇಟ್ 'ನಾನು ಕೇರಳದವಳು. ಹೆಚ್ಚು ಮಾತನಾಡಿದರೆ ವಾಮಾಚಾರ ಮಾಡುತ್ತೇನೆ' ಎಂದು ಬೆದರಿಕೆ ಕೂಡ ಹಾಕಿದ್ದಾಳೆ.

ಇಲ್ಲಿನ ಜನರ ನಿದ್ದೆ ಮಾಡುವ ಹಕ್ಕಿಗೆ ಅಡ್ಡಿಪಡಿಸಬಾರದು ಎಂದಿದ್ದ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದೀಗ ಅವರು ಅಳುತ್ತಾ ತಮ್ಮ ನೋವನ್ನು ಹಂಚಿಕೊಂಡಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಾಕಿದ್ದು ವೈರಲ್​ ಆಗುತ್ತಿದೆ. ಇದರೊಂದಿಗೆ ಅವರು ವಾರ್ಡನ್​ಗೆ ಬರೆದಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net