ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯನ್ನು ನೀವೆಲ್ಲರೂ ಕೇಳಿರುತ್ತೀರಿ. ಈ ಘಟನೆಯಲ್ಲಿ ಮಾತ್ರ ಮಾಡಿದ್ದುಣ್ಣೋ ಮಹಾರಾಯ್ತಿ ಎಂದು ಬದಲಾಯಿಸಬೇಕೋ ಏನೋ.
ಹೈವೆಯಲ್ಲಿ ಹೊಗುತ್ತಿದ್ದ ಸ್ಕೂಟಿಯ ಹಿಂದೆ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಅದೇ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಬೈಕ್ ಸವಾರನನ್ನು ಕಂಡು ಏನೆನಿಸಿತೋ ಏನೋ. ಈ ಮಹಿಳೆ ಬೈಕ್ಗೆ ಕಾಲಿನಿಂದ ತುಳಿಯಲು ಪ್ರಯತ್ನಿಸಿದ್ದಾರೆ. ಆದರೆ ತಾವೇ ಆಯ ತಪ್ಪಿ ಸ್ಕೂಟಿಯಿಂದ ಬಿದ್ದಿದ್ದಾರೆ. ಈ ವಿಡಿಯೋವನ್ನು ‘ವಾಟ್ ಕುಡ್ ಗೋ ರಾಂಗ್’ ಎನ್ನುವ ರೆಡ್ಡಿಟ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಇನ್ನೂ ಮಜವಾದ ಸಂಗತಿ ಏನೆಂದರೆ ಆ ಬೈಕ್ ಸವಾರ ಏನೂ ಆಗಿಲ್ಲ ಎಂಬಂತೆ ಒಮ್ಮೆ ಹಿಂದೆ ತಿರುಗಿ ತನ್ನ ದಾರಿ ಹಿಡಿದಿದ್ದಾನೆ. ಅದಲ್ಲದೇ ಮಹಿಳೆ ಕೂತಿದ್ದ ಸ್ಕೂಟಿಯ ಸವಾರನೂ ಒಂದಿಷ್ಟೂ ಬ್ಯಾಲೆನ್ಸ್ ತಪ್ಪಿಲ್ಲ. ಅದೃಷ್ಟವಶಾತ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಕಾರು ವೇಗದಲ್ಲಿ ಚಲಿಸುತ್ತಿರಲಿಲ್ಲ.
ಸ್ಕೂಟಿಯ ಸವಾರ, ಮಹಿಳೆ ಹಾಗೂ ಬೈಕ್ ಸವಾರ ಯಾರೂ ಹೆಲ್ಮೆಟ್ ಧರಿಸದೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆ ಮಹಿಳೆಗೆ ಏನೂ ಆಗದೇ ಪಾರಾಗಿದ್ದು ಅದೃಷ್ಟದಿಂದ ಎಂದೇ ಹೇಳಬಹುದು. ಕಾಮೆಂಟ್ ವಿಭಾಗದಲ್ಲಿ ಕೆಲವರು ‘ಪ್ರತಿ ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ’ ಎಂದು ಬರೆದಿದ್ದಾರೆ.
ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!