More

    ಇನ್ಮುಂದೆ ಪಾಕಿಸ್ತಾನದ ಸುದ್ದಿ ವಾಹಿನಿ​ಗಳಲ್ಲಿ ಇಮ್ರಾನ್​ ಖಾನ್​ ಕಾಣಿಸಲ್ಲ; ಟಿವಿಯಿಂದಲೇ ಬ್ಯಾನ್​ ಆದ ಮಾಜಿ ಪ್ರಧಾನಿ!

    ಪಾಕಿಸ್ತಾನ: ಇಮ್ರಾನ್​ ಖಾನ್​ ಕಾಲಿಗೆ ಗುಂಡು ತಿಂದ ಕಥೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ, ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಕ್ಕೆ ಒಳಗಾಗಿದ್ದ ಪಾಕ್​ ಮಾಜಿ ಪ್ರಧಾನಿ ಈಗ ಅಲ್ಲಿನ ಟಿವಿ ಮಾಧ್ಯಮಗಳಿಂದಲೂ ಬ್ಯಾನ್​ ಆಗಿದ್ದಾರೆ.

    ಪಾಕಿಸ್ತಾನ ಸರ್ಕಾರ ಇಮ್ರಾನ್​ ಖಾನ್​ ಶನಿವಾರ ಮಾಡಿದ್ದ ಭಾಷಣವನ್ನು ಎಲ್ಲಾ ಮಾಧ್ಯಮದಿಂದ ತೆಗೆದು ಹಾಕಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ತರುವ ಈ ಭಾಷಣ ಜನರ ನಡುವೆ ದ್ವೇಷವನ್ನೂ ಮೂಡಿಸುತ್ತದೆ ಎಂಬ ಕಾರಣವನ್ನು ನೀಡಲಾಗಿದೆ. ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ನಿಯಂತ್ರಣ ಮಂಡಳಿ (PEMRA), ಇಮ್ರಾನ್​ ಖಾನ್​ ಭಾಷಣ ಪ್ರಸಾರ ಮಾಡುವ ಎಲ್ಲಾ ಸುದ್ದಿ ವಾಹಿನಿಗಳಿಗೆ ಶೋಕಾಸ್​ ನೋಟಿಸ್​ ಸಹ ನೀಡದೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದೆ.

    ಇಂಟರ್​ನೆಟ್​​ ಬಂದಿದ್ದರೂ ಇಂದಿಗೂ ಪಾಕಿಸ್ತಾನದಲ್ಲಿ ಜನರು ಹೆಚ್ಚು ನೋಡುವುದು ಟಿವಿ ಮಾಧ್ಯಮವನ್ನೇ. ಇದರಿಂದ ಇಮ್ರಾನ್​ ಖಾನ್​ಗೆ ಜನರನ್ನು ತಲುಪುವುದು ಕಷ್ಟವಾಗುತ್ತದೆ. ಇದರ ನೇರ ಹೊಡೆತ ಇಮ್ರಾನ್​ ಖಾನ್​ಗೆ ಮುಂಬರುವ ಪಾಕಿಸ್ತಾನ ಚುನಾವಣೆಗಳಲ್ಲಿ ಕಾಣಿಸಿಕೊಳ್ಳಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts