1, 2 ವರ್ಷದ ಹೆಣ್ಣುಮಕ್ಕಳೊಂದಿಗೆ ಗಂಡನ ಮನೆಯಿಂದ ಕಾಣೆಯಾದ ಮಹಿಳೆ; ಕಾಲುವೆಯಲ್ಲಿ ಶವಗಳಾಗಿ ಪತ್ತೆ!

Mother
Published on

ವಿಜಯಪುರ: ಹೆಣ್ಣು ಮಕ್ಕಳಿಬ್ಬರ ಸಹಿತ ಮಹಿಳೆಯೊಬ್ಬಳು ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡ ಪ್ರಕರಣ ನಡೆದಿದೆ. ಈ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ತಾಯಿಯೊಬ್ಬಳು ಇಬ್ಬರು ಹೆಣ್ಣುಮಕ್ಕಳ ಸಮೇತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೇಣುಕಾ ಅಮೀನಪ್ಪ ಕೋನಿನ್ (26 ) ಮತ್ತು ಈಕೆಯ ಪುತ್ರಿಯರಾದ ಯಲ್ಲವ್ವ (2) ಅಮೃತಾ (1) ಸಾವಿಗೀಡಾದವರು. ಈಕೆ ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿದ್ದಳು.

ಕಳೆದ ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳ ನಡೆದ ಕಾರಣ ಮನೆ ಬಿಟ್ಟು ಹೋಗಿದ್ದ ರೇಣುಕಾಳಿಗಾಗಿ ಹುಡುಕಾಟ ನಡೆದಿತ್ತು. ಅಲ್ಲದೆ ಕಾಣೆಯಾಗಿದ್ದ ಕುರಿತು ನಿನ್ನೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು. ಇಂದು ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು, ಇನ್ನೊಂದು ಮಗುವಿನ ಶವಕ್ಕಾಗಿ ಶೋಧ ಮುಂದುವರಿದಿದೆ. ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net