ಅತಿಯಾದರೆ ಅಮೃತವೂ ವಿಷ: ಅಗತ್ಯಕ್ಕಿಂತ ಹೆಚ್ಚು ನೀರು ಸೇವಿಸಿ ಆಸ್ಪತ್ರೆ ಸೇರಿದ ಮಹಿಳೆ

TikTok influencer Michelle Fairburn
Published on

ಕೆನಡಾ: ಅತಿಯಾದರೆ ಅಮೃತವೂ ವಿಷ ಎನ್ನುದು ಎಲ್ಲರಿಗೂ ತಿಳಿದ ವಿಚಾರ. ಹಾಗೇ, ಕುಡಿಯುವ ನೀರು ಆರೋಗ್ಯಕ್ಕೆ ಒಳ್ಳೆಯದು ಆದರೆ ಇಲ್ಲೊಬ್ಬ ಮಹಿಳೆ ಅತಿಯಾಗಿ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೆನಡಾದಲ್ಲಿ ನಡೆದಿದೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗನ ಪ್ರಾಣ ತೆಗೆದ ಮಾನಸಿಕ ಅಸ್ವಸ್ಥ ತಾಯಿ

ಮಿಚೆಲ್ ಫೇರ್ಬರ್ನ್ ಎಂಬ ಮಹಿಳೆ "75 ಹಾರ್ಡ್" ವೈರಲ್ ಫಿಟ್ನೆಸ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಳು. ಇದರ ಸವಾಲಿನ ಭಾಗವಾಗಿ ಆಕೆ 12 ದಿನಗಳ ಕಾಲ ನಾಲ್ಕು ಲೀಟರ್ ನೀರು ಕುಡಿದ ನಂತರ ಕೆನಡಾದ ಟೊರೊಂಟೊದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸವಾಲಿಗೆ ವ್ಯಕ್ತಿಯೊಬ್ಬರು ದಿನಕ್ಕೆರಡು ಬಾರಿ ಕಠಿಣವಾದ ವರ್ಕೌಟ್‌ಗಳನ್ನು ಮಾಡಬೇಕಾಗುತ್ತದೆ, ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು ಮತ್ತು ಪ್ರತಿದಿನ ಒಂದು ಗ್ಯಾಲನ್ ನೀರನ್ನು ಸೇವಿಸಬೇಕು ಹೀಗೆ ಮುಂತಾದ ಷರತ್ತುಗಳು ಈ ಚಾಲೆಂಜ್​ನ ಭಾಗವಾಗಿವೆ.

ಮಹಿಳೆಯು ಅತಿಯಾದ ನೀರಿನ ಸೇವನೆಯಿಂದ ತಾನು ವಾಕರಿಕೆ, ದೌರ್ಬಲ್ಯ, ರಾತ್ರಿಯಿಡೀ ಮೂತ್ರ ವಿಸರ್ಜನೆ, ದಿಗ್ಭ್ರಮೆ, ಗೊಂದಲ, ವಾಂತಿ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ಅನುಭವಿಸಿದ್ದಾಗಿ ಹೇಳಿದ್ದಾಳೆ. ಈಕೆಯನ್ನು ಪರಿಕ್ಷಿಸಿದ ವೈದ್ಯರು, ಆಕೆಯ ದೇಹದಲ್ಲಿ ತೀವ್ರವಾದ ಸೋಡಿಯಂ ಕೊರತೆ ಇರುವುದು ಪತ್ತೆಯಾಗಿದೆ. ಆಕೆಗ ಚಿಕಿತ್ಸೆ ನೀಡದಿದ್ದರೆ ಆಕೆಯ ಪ್ರಾಣಕ್ಕೆ ಹಾನಿಯಿದ್ದು, ಕಡಿಮೆ ನೀರನ್ನು ಕುಡಿಯುವಂತೆ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net