

ತಿರುಚ್ಚಿ: ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ 47 ಜೀವಂತ ಹಾವುಗಳು ಮತ್ತು ಎರಡು ಹಲ್ಲಿಗಳನ್ನು ವಶಪಡಿಸಿಕೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆ: ಶಾಲೆಯ ಬಳಿಯೇ ಬಿಸಾಡಿ ಹೋದ ನಿರ್ದಯಿಗಳು..
ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್ ಮೊಯ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಕೌಲಾಲಂಪುರದಿಂದ ಆಗಮಿಸಿದ ಪ್ರಯಾಣಿಕನಾಗಿದ್ದಾನೆ. ಬಾಟಿಕ್ ಏರ್ ವಿಮಾನದ ಮೂಲಕ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಕಸ್ಟಮ್ಸ್ ಅಧಿಕಾರಿಗಳು ಮೊಯ್ದೀನ್ನನ್ನು ತಡೆದಿದ್ದಾರೆ.
ಕೊನೆಗೆ ಆತನ ಬ್ಯಾಗ್ ವಿಚಿತ್ರವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ, ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟ ವಿವಿಧ ಪ್ರಭೇದಗಳ, ವಿವಿಧ ಗಾತ್ರಗಳ ಜೀವಂತ ಹಾವುಗಳು ಪತ್ತೆಯಾಗಿವೆ. ಬಳಿಕ ಅರಣ್ಯಾಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ 47 ಹೆಬ್ಬಾವು ಮತ್ತು ಎರಡು ಹಲ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಸರೀಸೃಪಗಳ ಅಕ್ರಮ ಸಾಗಣೆ, ಕೃತ್ಯದಲ್ಲಿ ಭಾಗಿಯಾಗಿರುವ ಉದ್ದೇಶ ಮತ್ತು ಇತರ ಸಂಭಾವ್ಯ ಸಹಚರರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)