ವಾರದ ಬಳಿಕ ಬಳಸದೇ ಪಾರ್ಕ್​ ಮಾಡಿದ್ದ ಕಾರಿನ ಬಾಗಿಲು ತೆರೆಯಲು ಹೋದ ಮಹಿಳೆಗೆ ಕಾದಿತ್ತು ಶಾಕ್​!

Car
Published on

ಸಿಡ್ನಿ​: ಯಾವುದೇ ವಸ್ತುವನ್ನಾಗಲಿ ಆಗಾಗ ಉಪಯೋಗಿಸುತ್ತಿರಬೇಕು ಮತ್ತು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಏನಾದರೂ ಸಂಭವಿಸಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಸುಮಾರು ಒಂದು ವಾರಗಳ ಕಾಲ ಉಪಯೋಗಿಸದೇ ಆಗೇ ಪಾರ್ಕ್​ ಮಾಡಿದ್ದ ಕಾರನ್ನು ಚಲಾಯಿಸಲು ಮುಂದಾದ ಮಹಿಳೆಗೆ ಆಘಾತವೊಂದು ಎದುರಾಗಿತ್ತು.

ಆಸ್ಟ್ರೇಲಿಯಾದ ನ್ಯೂ ಸೌಥ್​ ವೇಲ್ಸ್​ನ ಅರ್ಮಿಡೇಲ್​ ನಗರದ ಮಹಿಳೆ ತನ್ನ ಕಾರಿನ ಬಾಗಿಲು ಫೋಟೋವನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ಕಾರನ್ನು ಉಪಯೋಗಿಸಿರಲಿಲ್ಲ. ಆ ಬಳಿಕ ಕಾರಿನ ಚಾಲನೆಗೆ ಮುಂದಾಗಿ ಬಾಗಿಲು ತೆರೆಯಲು ಹೋದಾಗ ಡೋರ್​ನ ಹ್ಯಾಂಡಲ್​ ಒಳಗೆ ಕೂದಲು ಮಿಶ್ರಿತ ದೊಡ್ಡ ಗಾತ್ರದ ಜೇಡ ಪತ್ತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಕಾರಿನ ಹ್ಯಾಂಡಲ್​ ಕೆಳಗೆ ಒಂದು ನಿಗೂಢ ಜೀವಿ ಅಂಟಿಕೊಂಡಿರುವುದನ್ನು ಕಾಣಬಹುದಾಗಿದೆ. ಕೂದಲು ಮಿಶ್ರಿತ ಕಾಲು, ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ದೇಹದಿಂದಲೇ ಜೇಡವನ್ನು ಬ್ರ್ಯಾಂಡ್​ ಹಂಟ್ಸ್​ಮನ್​ ಎಂದು ಗುರುತಿಸಲಾಗಿದೆ.

ಇನ್ನು ಫೋಟೋವನ್ನು 31 ಸಾವಿರಕ್ಕೂ ಹೆಚ್ಚು ಮಂದಿ ಆಸ್ಟ್ರೇಲಿಯನ್​ ಸ್ಪೈಡರ್​ ಹುಡುಕುವಿಕೆ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದ್ದಾರೆ. ಕಾರಿನ ಬಾಗಿಲು ತೆಗೆಯುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಬೇಕು ಎಂಬುದು ಫೋಟೋ ನೋಡಿದ ಮೇಲೆ ತಿಳಿಯಿತು. ನಿಜಕ್ಕೂ ಜೇಡ ಭಯ ಹುಟ್ಟಿಸುವಂತಿದೆ ಎಂದು ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಫೋಟೋ ಕುರಿತು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net